ಮಾಲ್ವಾನಾ, ಮೇ 13: ಅಖಿಲ ಭಾರತ ಕೊಂಕಣಿ 32 ನೆಯ ಪರಿಷದ್ ಅಧಿವೇಶನವು ನಾಳೆ 14 ಮೇ ಶನಿವಾರ ಮತ್ತು 15 ರವಿವಾರ ಮಹಾರಾಷ್ಟ್ರ ರಾಜ್ಯದ ಮಾಲ್ವಾನಾದಲ್ಲಿ ನಡೆಯಲಿದೆ ಮತ್ತು  ವಿಜೃಂಭಣೆಯಿಂದ ನಡೆಯುವ ‌ಕಾರ್ಯಕ್ರಮವನ್ನು ಕೊಂಕಣಿ ಏಕೈಕ ರಾಜ್ಯವಾದ ಗೋವಾದ‌ ಮುಖ್ಯಮಂತ್ರಿ ಯವರಾದ ಪ್ರಮೋದ್ ಸಾವಂತ್ ಮಾಡಲಿದ್ದಾರೆ ಎಂದು ಪರಿಷದ್ ಅಧ್ಯಕ್ಷರಾದ ಉಷಾ ರಾಣೆ‌ ಹೇಳಿದ್ದಾರೆ.

ಉಷಾ ರಾಣೆ‌, ಅಧ್ಯಕ್ಷೆ, ಅಖಿಲ ಭಾರತ ಕೊಂಕಣಿ ಪರಿಷದ್

ಗೋವಾದ ರಾಜ್ಯದ ಅಧಿಕೃತ ಆಡಳಿತ ಭಾಷೆಯಾಗಿ ಆಂಗೀಕಾರವೂ ಅಗಿದೆ.

ಕೊಂಕಣಿ 50 ಲಕ್ಷ ಜನರು ಮಾತನಾಡುತ್ತಾ ಇದ್ದು ದೇವನಾಗರಿ ಪ್ರಮುಖವಾಗಿ ತನ್ನ ‌ಲಿಪಿಯನ್ನು‌ ರಾಷ್ಟ್ರೀಯ ಮಟ್ಟದಲ್ಲಿ ಅಂಗೀಕಾರ ಮಾಡಲಾಗಿದ್ದು ಭಾರತದ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಅಂಗೀಕಾರ ಆಗಿದೆ.

ಗೋವಾ,ಮಹಾರಾಷ್ಟ್ರ, ಕರ್ನಾಟಕ, ಕೇರಳದಲ್ಲಿ ಪ್ರಮುಖ ಕೊಂಕಣಿ ಭಾಷಿಗರು ಇದ್ದು ಈ ದ್ವೈವಾರ್ಷಿಕ ಪರಿಷದ್ ಬೈಠಕ್ ನಲ್ಲಿ ಐನೂರು ರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳು ಒಟ್ಟಾಗಿಲಿದ್ದಾರೆ.

82 ವರುಷಗಳ ಹಿಂದೆ ಕರ್ನಾಟಕದಲ್ಲಿ ಕಾರವಾರದಲ್ಲಿ ಉದ್ಘಾಣೆಗೊಂಡ ಅಖಿಲ ಭಾರತ ಕೊಂಕಣಿ ಪರಿಷದ್ ಇಂದು ಅದರ ಮೊದಲ ಮಹಿಳಾ ಅದ್ಯಕ್ಷರಾಗಿ ಉಷಾ ರಾಣೆ ಅವರು ‌ಕೊರೊನಾ ಹೊರತಾಗಿಯೂ ‌ನೂರಾರು‌ ಕಾರ್ಯಕ್ರಮಗಳನ್ನು ಆಯೋಜಿಸಿದ ‌ಯಶಸ್ವಿ ಅದ್ಯಕ್ಷ ಆಗಿದ್ದಾರೆ.

ಲೋಕದ ಎಲ್ಲಾ ಭಾಗಗಳಲ್ಲಿ ಉದ್ಯೋಗ ಮತ್ತಿತರರ ಕಾರಣದಿಂದ ಹೋದವರು ಅಲ್ಲಿ ತಮ್ಮ ಕೊಂಕಣಿ ಸಂಘಟನೆ ಮಾಡಿ ಕೊಂಕಣಿ ಮಾತೃಭಾಷೆಯನ್ನು ಆರಾಧಿಸಿದ ಹಲವಾರು ಒಂದು ವೇದಿಕೆಯಲ್ಲಿ ದ್ವೈವಾರ್ಷಿಕ ಜೊತೆಯಲ್ಲಿ ಇರುವ ಈ ಸಂಭ್ರಮ ಮಾಲ್ ವಾನರ ರಾಷ್ಟ್ರೀಯ ಸ್ಮಾರಕ ಹಾಗೂ ಆಕರ್ಷಣೆ ಸಿಂಧೂದುರ್ಗ ಕೋಟೆಯ ಬಳಿ ನಡೆಯುತ್ತದೆ.

ಬೊವ್ ನಾಥ್ ಪೈ ಸೇವಾಂಗಣ ಧುರಿವಾಡಾ ಮಾಲ್ವಾಣವು ಕುಡಾಲ ಕೊಂಕಣ ರೈಲು ನಿಲ್ದಾಣದಿಂದ ಜೋಡಣೆ ಆಗಿದ್ದು ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ್ ಜಿಲ್ಲೆಯಲ್ಲಿ ಇದೆ.

ಕಲೆ ಮತ್ತು ಸಂಸ್ಕೃತಿಗಳ ಮಂತ್ರಿ ಗೋವಿಂದ ಗೌಡೆ ಮಾಲ್ವಾನದ ಶಾಸಕರು ವೈಭವ್ ಜಿ ನಾಯ್ಕ್,ಕೊಂಕಣಿ ಜ್ಞಾನ ‌ಪೀಠ ಪುರಸ್ಕೃತ ದಾಮೋದರ್ ಮೌಜೊ, ಮಹೇಂದ್ರ ಕಾಂಬ್ಳಿ ಖ್ಯಾತ ಕಲಾವಿದರು ಹಾಗೂ ಸರಕಾರದ ವಿವಿಧ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಪರಿಷದ್ ನಡೆಯುವ ಸ್ಥಳ ಸೇವಾಂಗಣವು ಸಾಂತಾಕ್ರೂಜ್ ಬೀಚ್ ಬದಿಯಲ್ಲಿ ಇರುವುದು ಹಾಗೂ ಮಾಲ್ವಾಣವು ಟೂರಿಷ್ಟ್ ಸ್ವರ್ಗ ಆಗಿರುವುದು ಆಯೋಜಕರು ಮಾಡಿದ ಉತ್ತಮ ಆಯ್ಕೆಯಾಗಿದೆ.

ಸಕಲ ತಯಾರಿಗಳು ಈಗಾಗಲೇ ‌ಮುಗಿದಿದ್ದು ಬರುವ ‌ಪ್ರತಿನಿಧಿಗಳಿಗೆ ಎಲ್ಲಾ ಸವಲತ್ತುಗಳನ್ನು ‌ಮೀಸಲು ಮಾಡಿ ಆಯೋಜಕರಾದ ಗೌರೀಶ್ ವರ್ಣೇಕರ್, ಯೋಗಿತಾ ವರ್ಣೇಕರ್,ರುಜಾರಿಯೋ‌ ಪಿಂಟೋ ಮತ್ತಿತರರ ಕಾರ್ಯಕರ್ತರು ಮುಂತಾದವರು ಉಷಾ ರಾಣೆಯೊಡನೆ ಕಾಯತ್ತಿದ್ದಾರೆ.