ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಎಂಟನೆಯ ಬಾರಿ ಪ್ರಮಾಣ ವಚನ ಸ್ವೀಕರಿಸಿದರು. ಮೈತ್ರಿ ಬದಲಿಸುತ್ತ ಎರಡು ದಶಕದ ಹತ್ತಿರ ನಿತೀಶ್ ಮುಖ್ಯಮಂತ್ರಿ ಹುದ್ದೆಗೆ ಅಂಟಿಕೊಂಡಿದ್ದಾರೆ.
ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಎರಡನೆಯ ಬಾರಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದೇ ಮೈತ್ರಿ ರಚನೆಯಾಗಿ ಅಧಿಕಾರಕ್ಕೆ ಬಂದಿತ್ತು. ಆದರೆ ಮಧ್ಯದಲ್ಲಿ ನಿತೀಶ್ ಬಿಜೆಪಿ ಮೈತ್ರಿಗೆ ಹಾರಿದ್ದರು. ಮತ್ತೆ ವಾಪಾಸು ಬಂದಿದ್ದಾರೆ.
2024ರಲ್ಲಿ ಮೋದಿ ಹೇಗೆ ಗೆಲ್ಲುತ್ತಾರೆ, ಪ್ರತಿಪಕ್ಷಗಳ ಒಕ್ಕೂಟ ಗಟ್ಟಿ ಮಾಡಲು ಈ ಮೈತ್ರಿ ಎಂದು ಅವರು ಹೇಳಿದರು.