ದಿಲ್ಲಿ ಮಹಾನಗರ ಪಾಲಿಕೆಯ 250 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಬಹುತೇಕ ಮುಗಿದಿದ್ದು, ಆಮ್ ಆದ್ಮಿ ಪಕ್ಷವು ಸ್ಪಷ್ಟವಾಗಿ ಬಿಜೆಪಿಯ 15 ವರುಷಗಳ ಆಡಳಿತವನ್ನು ಕೊನೆಗೊಳಿಸಿದೆ.
Image Courtesy: India Today
ಎಎಪಿಯು ಮ್ಯಾಜಿಕ್ ಸಂಖ್ಯೆ 126ನ್ನು ಮುಟ್ಟಿದೆ. ಬಿಜೆಪಿ ನೂರರೊಳಗೆ ಇರುವುದರಿಂದ ಖರೀದಿ ಆಡಳಿತ ಕೂಡ ಸಾಧ್ಯವಿಲ್ಲ.
ಕಾಂಗ್ರೆಸ್ ಮೂರನೆಯ ಸ್ಥಾನದಲ್ಲಿದ್ದರೂ ಬಹು ದೂರದಲ್ಲಿದೆ. ಅದು ಎರಡಂಕಿ ಮುಟ್ಟಿರುವುದೇ ವಿಶೇಷ.
ಆಮ್ ಆದ್ಮಿ ಪಕ್ಷವು ಬಿಜೆಪಿಯನ್ನು ಸೋಲಿಸುವಾಗ ಕಾಂಗ್ರೆಸ್ಸನ್ನು ಪೂರ್ಣ ಕೆಡವಿದೆ.
ಬಿಜೆಪಿಯ ದುರಾಡಳಿತಕ್ಕೆ ಕೊನೆ ಎಂದರೂ ಇದು ನಮ್ಮ ಮೇಲೆ ಬಿದ್ದಿರುವ ದೊಡ್ಡ ಹೊರೆ ಎಂದು ದಿಲ್ಲಿಯಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದ ಉಪ ಮುಖ್ಯಮಂತ್ರಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಹೇಳಿದರು.