ಸುರತ್ಕಲ್‌ನ ಕಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ಗೆ ಬಟ್ಟೆ ಬದಲಾಯಿಸುವ ಮಹಿಳೆಯರ ವೀಡಿಯೋ ಮಾಡುತ್ತಿದ್ದ ನರ್ಸಿಂಗ್ ವಿದ್ಯಾರ್ಥಿಯನ್ನು ಪೋಲೀಸರು ಬಂಧಿಸಿದ್ದಾರೆ.
ಕಲಬುರಗಿ ಮೂಲದ ಬಜಪೆ ಮೂಲದ 21ರ ಪವನ್ ಕುಮಾರ್ ಬಂಧಿತ ನರ್ಸಿಂಗ್ ವಿದ್ಯಾರ್ಥಿ. ಸ್ಕ್ಯಾನಿಂಗ್ ಮಾಡಲು ಬರುವ ಮಹಿಳೆಯರು ಬಟ್ಟೆ ಬದಲಿಸಲು ಒಂದು ಕೋಣೆ ಇತ್ತು. ಅಲ್ಲಿ ಪವನ್ ಕುಮಾರ್ ಮೊಬಾಯಿಲ್ ಅಡಗಿಸಿಟ್ಟಿದ್ದ. ಸ್ಕ್ಯಾನಿಂಗಿಗೆ ಬಂದ ಒಬ್ಬರು ಇದನ್ನು ಕಂಡು ದೂರು ನೀಡಿದ್ದಾರೆ. ಆಸ್ಪತ್ರೆಯವರೇ ಆರೋಪಿಯನ್ನು ಕಂಡು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.