ಬಿಬಿಸಿಯ ಜಗತ್ತಿನ ನೂರು ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಭಾರತದ ನಾಲ್ವರಿಗೆ ಸ್ಥಾನ ಸಿಕ್ಕಿದೆ. ಇವರಾರೂ ಉದ್ಯಮಿ, ರಾಜಕಾರಣಿಗಳಲ್ಲ ಎನ್ನುವುದೇ ವಿಶೇಷ.
From Left: ಪ್ರಿಯಾಂಕಾ ಚೋಪ್ರಾ ಜೋನಾಸ್, ಶಿರಿಸಾ ಬಂಡ್ಲಾ, ಗೀತಾಂಜಲಿಶ್ರೀ, ಸ್ನೇಹಾ ಜವಳೆ
ನಟಿ, ಮಾಡೆಲ್, ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಜೋನಾಸ್. ಕೌಟುಂಬಿಕ ದೌರ್ಜನ್ಯದ ಸಂತ್ರಸ್ತೆಯಾಗಿದ್ದು, ಸಮಾಜ ಸೇವಕಿಯಾಗಿ ಬೆಳೆದಿರುವ ಸ್ನೇಹಾ ಜವಳೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಿರಿಸಾ ಬಂಡ್ಲಾ. ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಗೀತಾಂಜಲಿಶ್ರೀ. ಈ ನಾಲ್ವರೇ ಆ ಮಹಿಳೆಯರು.