ಮಂಗಳೂರಿನ ಬಸ್ ನಿಲ್ದಾಣದ ಬಳಿ ಮೆಕಾನಿಕ್ ಒಬ್ಬರಿಗೆ ಸಣ್ಣ ಹಣದ ಬಾಕ್ಸ್‌ನಲ್ಲಿ ರೂಪಾಯಿ 500ರ ಕಟ್ಟು ದೊರೆತಿದ್ದು, ಅದರ ವಾರಸುದಾರರು ಯಾರೆಂದು ಪತ್ತೆಯಾಗಿಲ್ಲ. ಮೆಕಾನಿಕ್‌ಗೆ ಈ ಹಣ ಸಿಕ್ಕಿದ್ದು, ಹಣದ ಕಟ್ಟಿನ ಬಗೆಗೆ ಬೇರೆಯವರು ಸಂಶಯ ಪ್ರಕಟಿಸಿದಾಗ ಕಂಕನಾಡಿ ಪೋಲೀಸರು ಆತನನ್ನು ಬಂಧಿಸಿ, ಹಣ ವಶಕ್ಕೆ ಪಡೆದಿದ್ದಾರೆ.

ಇದು ಕದ್ದದ್ದಲ್ಲ, ಬಸ್ ನಿಲ್ದಾಣದ ಬಳಿ ಸಿಕ್ಕಿದೆ. ಇದರಲ್ಲಿ ಯಾವುದೇ ವಿಳಾಸ, ಫೋನ್ ನಂಬರ್ ಇಲ್ಲ. ಐದಾರು ಲಕ್ಷ ಇರಬಹುದು. ನನ್ನ ಬಳಿ ಇದನ್ನು ಗಮನಿಸಿದ ಒಬ್ಬನಿಗೆ ಒಂದು ಕಟ್ಟು ಹಣ ಕೊಟ್ಟೆ. 500ರ ಎರಡು ನೋಟು ತೆಗೆದು ಮದ್ಯದಂಗಡಿಯಲ್ಲಿ ವ್ಯಯಿಸಿದ್ದೇನೆ ಎಂದು ಮೆಕಾನಿಕ್ ಹೇಳಿದ್ದಾನೆ. 

ವೀಡಿಯೋ ಮಾಡಿ ಆ ಹಣವನ್ನು ಎಣಿಸಿದ್ದೇವೆ. 49,000 ಮಾತ್ರ ಇದೆ. ಕೋರ್ಟಿಗೆ ಮಾಹಿತಿ ನೀಡಲಾಗುವುದು ಎಂದು ಕಂಕನಾಡಿ ನಗರ ಪೋಲೀಸರು ತಿಳಿಸಿದ್ದಾರೆ.ಇನ್ನೊಂದು ಕಟ್ಟು ಒಯ್ದವನು ಯಾರು? ಅದರಲ್ಲಿ ಎಷ್ಟು ಹಣ ಇತ್ತು ಎಂಬುದು ಇನ್ನೂ ತಿಳಿದು ಬಂದಿಲ್ಲ.