ಏಶಿಯಾದ ಕರಾವಳಿಯಲ್ಲಿ ವಾಸಿಸುತ್ತಿದ್ದವು ಎನ್ನಲಾದ ದೊಡ್ಡ ಚಾಕುವಿನಂಥ ಮುಂಗಾಲು ಉಗುರುಗಳನ್ನು ಹೊಂದಿದ್ದ ಡಿನೋಸಾರ್ ಪಳೆಯುಳಿಕೆಗಳು ಜಪಾನಿನ ಉತ್ತರ ಹೊಕೈಡೊ ದ್ವೀಪದ ಉತ್ಖನನದಲ್ಲಿ ಪತ್ತೆಯಾಗಿದೆ.
ಯುಎಸ್‌ಎ, ಜಪಾನ್ ತಜ್ಞರು 30 ಅಡಿ ಉದ್ದದ, 3 ಟನ್ ಭಾರದ ಈ ಡಿನೋಸಾರ್‌ಗಳು ಸಸ್ಯಾಹಾರಿಗಳು ಎಂದು ತಿಳಿಸಿದ್ದಾರೆ. ಮುಂಗಾಲಿನಲ್ಲಿ ತಲಾ ಮೂರು ಈ ಖಡ್ಗ ಚಾಕು ಉಗುರುಗಳು ಇದ್ದು ಗೆಲ್ಲು ಬಾಗಿಸಲು, ಗಡ್ಡೆ ಅಗೆಯಲು, ಒಡೆದು ತಿನ್ನಲು ಬಳಕೆಯಾಗುತ್ತಿದ್ದವು ಎಂದು ಸಂಶೋಧಕರು ತಿಳಿಸಿದ್ದಾರೆ.