ಮಂಗಳೂರು:- ಮಂಗಳೂರು ಮಾಧ್ಯಮದವರನ್ನು ವಾರ್ತಾ ಇಲಾಖೆಯ ವತಿಯಿಂದ ಪಿಲಿಕುಳ ನಿಸರ್ಗ ಧಾಮದವರು ಸ್ಥಳಕ್ಕೆ ಕರೆದೊಯ್ದು ಅಭಿವೃದ್ಧಿಯ ಮಾಹಿತಿಗಳನ್ನು ನೀಡಿದರು. ಪಿಲಿಕುಳ ಇನ್ನು ಎಷ್ಟು ಕಾಲ ಅಭಿವೃದ್ಧಿ ಹೊಂದುತ್ತಿರುವ ಫಲಕ ಹೊತ್ತಿರಬೇಕು ಎನ್ನುವ ಪ್ರಶ್ನೆ ಹಾಗೆಯೇ ಉಳಿಯುತ್ತದೆ.
ಗುತ್ತಿನ ಮನೆಗೆ ಭೇಟಿ ನೀಡಿದಾಗ ಬೂಡುಗಳ ಒಂದು ಸ್ಥೂಲ ಚಿತ್ರಣದೊಂದಿಗೆ ಆ ಕಾಲದ ಮನೆಯ ವಾತಾವರಣ ಅನಾವರಣ ಆಗುತ್ತದೆ. ಕುಶಲ ಕರ್ಮಿಗಳ ವಲಯ ಹಿಂದಿನ ಹಳ್ಳಿಯ ಗಾಣ, ಅವಲಕ್ಕಿ ಏತ, ಕುಂಬಾರಿಕೆ, ಬಡಗಿ, ಕಮ್ಮಾರ, ನೆಯ್ಗೆ ಮಗ್ಗ, ಬೆತ್ತದ ವಸ್ತುಗಳು ಇತ್ಯಾದಿಗಳನ್ನು ಉಳಿಸುವ ಪ್ರಯತ್ನ ಕಾಣುತ್ತದೆ.
ಗುತ್ತಿನ ಮನೆಯ ಮುಖ್ಯ ಬಾಗಿಲು ಗುತ್ತಿನ ಮನೆಯ ದೈವದ ಕೋಣೆ
ಪ್ರಾಣಿಗಳ ಪ್ರದೇಶ ಅವುಗಳ ಓಡಾಟದಿಂದ ಸ್ವಲ್ಪ ಬಣಬಣ. ಜಾನುವಾರು ಮಾಂಸದ ಸಮಸ್ಯೆ ಕಾಡು ಪ್ರಾಣಿಗಳನ್ನು ಗೂಡಿನೊಳಗೆ ಸ್ವಲ್ಪ ಬಾಧಿಸಿದಂತೆ ಕಾಣಿಸುತ್ತದೆ. ಬೋಟಿಂಗ್ ಒಂದು ಬದಲಾವಣೆಯನ್ನು ನೀಡಿದರೆ ಸದ್ಯ ನೀರುದ್ಯಾನ ಮುಚ್ಚಿದೆ. ಸಸ್ಯ ವನ, ಮೂಲಿಕೆ ವನ, ಬೊಟಾನಿಕಲ್ ಮ್ಯೂಸಿಯಂ ಉತ್ತಮ.
ಪತ್ರಿಕಾಗೋಷ್ಠಿ ನಡೆಸಿದ ನಾಯಕ್
ಈ ಬಗೆಗೆ ಪತ್ರಿಕಾಗೋಷ್ಠಿ ನಡೆಸಿದ ಕಾರ್ಯನಿರ್ವಾಹಕ ನಿರ್ದೇಶಕರಾದ ಗೋಕುಲದಾಸ್ ನಾಯಕ್ ಅವರು 400 ಎಕರೆ ವಿಶಾಲವಾದ ನಿಸರ್ಗ ಧಾಮ ಹಣಕಾಸು ಹೊಂದಿಸುವ ಹಾದಿಯಲ್ಲಿ ಇದೆ. ಇಲ್ಲಿನ ತಿಂಗಳ ವೆಚ್ಚ 45 ಲಕ್ಷ ರೂಪಾಯಿ ಅಂದರೆ ವರುಷಕ್ಕೆ 5 ಕೋಟಿ ರೂಪಾಯಿ ನಿರ್ವಹಣೆಗೆ ಬೇಕು. ಈಗ ಆಗುತ್ತಿರುವ ಪ್ರವೇಶ ಶುಲ್ಕದ ಮೊತ್ತ ವರುಷಕ್ಕೆ 3.5 ಕೋಟಿ ಇದೆ. ಎಂಆರ್ ಪಿಎಲ್ ಪ್ರಾಣಿಗಳನ್ನು ದತ್ತು ಪಡೆದಿರುವುದರಿಂದ ಅಲ್ಲಿಂದಲ್ಲಿಗೆ ಆಗುತ್ತಿದೆ. ಪಿಲಿಕುಳ ನಿಸರ್ಗ ಧಾಮ ಮತ್ತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಎರಡಕ್ಕೂ ಜಿಲ್ಲಾಧಿಕಾರಿ ಅಧ್ಯಕ್ಷರು. ನಿಸರ್ಗ ಧಾಮಕ್ಕೆ ಇಡಿ ಇದ್ದರೆ ಪ್ರಾಧಿಕಾರಕ್ಕೆ ಕಮಿಶನರ್ ಇರುತ್ತಾರೆ. 23 ಸದಸ್ಯರ ಮಂಡಳಿಯೂ ಇದೆ. ಮೂವರು ವಿಷಯ ತಜ್ಞರನ್ನು ನೇಮಿಸಲಾಗುತ್ತದೆ ಎಂದು ಗೋಕುಲದಾಸ್ ವಿವರ ನೀಡಿದರು.
ಆಸ್ಟ್ರಿಚ್ ಬಂಧನದಲ್ಲಿ ಬಿಳಿ ನವಿಲು
ಕುಂಬಾರಿಕೆ ಆಮೆ
ಮುಖ ತೋರಿಸದ ನೀರಾನೆಗಳು ಕೃಷ್ಣ ಮೃಗ
ಪತ್ರಿಕಾಗೋಷ್ಠಿಯಲ್ಲಿ ಸಸ್ಯ ವಿಜ್ಞಾನಿ ರಾಮಕೃಷ್ಣ ಮತ್ತು ಆಡಳಿತಾಧಿಕಾರಿ ಬಾಬು ದೇವಾಡಿಗ ಇದ್ದರು. ಇಂಡೋ ನಾರ್ವೆ ಸಸ್ಯೋದ್ಯಾನ ಯೋಜನೆಯ ಅನುದಾನದಡಿ ಪಶ್ಚಿಮ ಘಟ್ಟಗಳ ವಿಶಿಷ್ಟ ಸಸ್ಯಗಳನ್ನು ಮತ್ತು ಎಲ್ಲ ಬಗೆಯ ಸಸ್ಯಗಳನ್ನು ರಕ್ಷಿಸುವ ಕೆಲಸ ಇಲ್ಲಿ ನಡೆದಿದೆ. ಸಸ್ಯ ವಿಜ್ಞಾನ ಅಧ್ಯಯನಕ್ಕೆ ಅಗತ್ಯದ ಸಂಗ್ರಹಾಲಯ, ಮ್ಯೂಸಿಯಂ ಇದೆ. 60 ಬಗೆಯ ಭತ್ತದ ತಳಿ ರಕ್ಷಣೆ, 200 ಮರಗಳ ಅಶೋಕ ವನ, 250 ಜಾತಿಯ ವಿಶೇಷ ಮರಗಳು ಅವುಗಳಲ್ಲಿ 70 ಪಶ್ಚಿಮ ಘಟ್ಟದಲ್ಲಿ ಮಾತ್ರ ಇರುವವು, ಬಿದಿರು ವನ, ನಿರ್ವಂಶದ ಹಾದಿಯಲ್ಲಿರುವ ಮರ ಗಿಡಗಳ ವನ, ಹಲವು ಜಾತಿಯ ಬಿದಿರು ವನ, ಮದ್ದಿನ ಗಿಡಗಳ ತೋಟ, ಬೊಟಾನಿಕಲ್ ಮ್ಯೂಸಿಯಂ ಬಗೆಗೆ ಸಸ್ಯ ವಿಜ್ಞಾನಿ ರಾಮಕೃಷ್ಣ ಮಾಹಿತಿ ಕೊಟ್ಟರು.