ಪುತ್ತೂರು: ದ.ಕ.ಜಿಲ್ಲಾ ಹಿಂದಿ ಶಿಕ್ಷಕ ಸಂಘ, ಹಿಂದಿ ಶಿಕ್ಷಕ ಸಂಘ ಪುತ್ತೂರು ಸಹಯೋಗದಲ್ಲಿ ಸೆಪ್ಟೆಂಬರ್ 20ರಂದು ಪುತ್ತೂರು ಸಂತ ವಿಕ್ಟರ್ ಶಾಲೆಯಲ್ಲಿ ಹಿಂದೀ ದಿನಾಚರಣೆ -ವಿಷಯ ಸಂಪದೀಕರಣ ಕಾರ್ಯಕ್ರಮ ನಡೆಯಿತು. ದ.ಕ.ಜಿಲ್ಲಾ ಶಾಲಾ ಶಿಕ್ಷಣ ಉಪನಿರ್ದೇಶಕರು ವೆಂಕಟೇಶ್ ಸುಬ್ರಾಯ ಪಠಗಾರ್ ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಕ ಕಾಲಕಾಲಕ್ಕೆ ಸರಿಯಾಗಿ ನೂತನ ವಿಚಾರ, ವಿಷಯ ಜ್ಞಾನವನ್ನು ಪಡೆಯುತ್ತಿರುವುದು ಇಂದು ಅತ್ಯಂತ ಅವಶ್ಯಕ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸಂಚಾಲಕ ಫಾ.ಲಾರೆನ್ಸ ಮಸ್ಕರೇನಸ್, ಡಯಟ್ ಹಿರಿಯ ಉಪನ್ಯಾಸಕರು ಶಶಿಧರ ಜಿ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್.,ಮು.ಶಿ.ರೋಸ್ಲೀನ್ ಲೋಬೋ, ಡಾ.ದುರ್ಗಾರತ್ನಾ ಸಿ., ಆಗಮಿಸಿದ್ದರು . ಸಂಘದ ಅಧ್ಯಕ್ಷ ಗೀತಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಹಮ್ಮದ್ ರಿಯಾಜ್, ಅಬ್ರಹಾಂ, ಕೃಷ್ಣ ನಾರಾಯಣ ಮುಳಿಯ, ಮೊಹಮ್ಮದ್ ಸಾಹೇಬ , ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ರಮಾನಂದ, ಹಾಜರಿದ್ದರು. ಕವಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಅಧ್ಯಕ್ಷ ರೋನಾಲ್ಡ್ ಮೋನಿಸ್ ವಂದಿಸಿದರು.

ಇದೇ ಸಂದರ್ಭದಲ್ಲಿ ಹಿಂದಿ ಭಾಷೆಯ ನಿವೃತ್ತ ಶಿಕ್ಷಕರನ್ನು, ವಿಶೇಷ ಸಾಧನೆಗೈದ ಸಾಧಕರಿಗೆ ಗೌರವ, ನೂರು ಶೇಕಡಾ ಫಲಿತಾಂಶ ಪಡೆದವರನ್ನು ಸಂಮಾನಿಸಲಾಯಿತು. ಮಧ್ಯಾಹ್ನ ವಿಷಯ ಸಂಪದೀಕರಣ, ಪಾಠ ಪುಸ್ತಕ ಪ್ರಶ್ನೆ ಗಳಿಗೆ ಪರಿಹಾರವನ್ನು ಒದಗಿಸಲಾಯಿತು.