News By : Rons bantwal

ಮುಂಬಯಿ, ಆ.31: ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ (ರಿ.) ಮಂಗಳೂರು ಹಾಗೂ ಎಸ್.ಸಿ.ಎಸ್ ಪದವಿ ಪೂರ್ವ ಕಾಲೇಜು ಜಂಟಿ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದ 2023-24ನೇ ಶೈಕ್ಷಣಿಕ ಸಮಾವೇಶ ಇಂದಿಲ್ಲಿ ಗುರುವಾರ ಪೂರ್ವಾಹ್ನ ಮಂಗಳೂರುನ ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜ್ ಸಭಾಂಗಣದಲ್ಲಿ ನಡೆಯಿತು.

ದ.ಕ ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಡಿ ಜಯಣ್ಣ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭ ಶಾಸಕ ಎಸ್.ಎಲ್ ಭೋಜೇಗೌಡ ಶೈಕ್ಷಣಿಕ ಸಮಾವೇಶಕ್ಕೆ ಚಾಲನೆ ನೀಡಿ ದೇರಳಕಟ್ಟೆ ಶಿವಾ'ಸ್ ಕಾಲೇಜ್‍ನ ಸಂಸ್ಥಾಪಕಾಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ (ಮುಂಬಯಿ) ಇವರಿಗೆ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಿದರು. ನಿವೃತ್ತ ಪ್ರಾಚಾರ್ಯರಾದ ಪ್ರೇಮಲತಾ ಎಂ., ಇಸ್ಮಾಯಿಲ್ ಟಿ., ಅಹಲ್ಯಾ ಕೆ., ಮಧುಕರ ಸಲಿನ್ಸ್, ಯೂಸುಫ್ ಡಿ., ಗೋಪಾಲಕೃಷ್ಣ ಇವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭ 27 ಪ್ರತಿಭಾನ್ವಿತ ವಿಧ್ಯಾಥಿರ್üಗಳಿಗೆ ಗೌರವಧನ ನೀಡಿ ಗೌರವಿಸಲಾಯಿತು.

ಎಸ್.ಸಿ.ಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಯು.ಕೆ ಖಾಲಿದ್, ಎಕ್ಸೆಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ., ದ.ಕ ಪದವಿಪೂರ್ವ ಶಿಕ್ಷಣ ಇಲಾಖೆಯ ನಿತಿನ್ ಬಿ.ಟಿ, ದ.ಕ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಉಪಾಧ್ಯಕ್ಷರಾದ ವಿಠಲ್ ಎ., ಸುಧೀರ್, ವಿನಾಯಕ ಬಿ.ಜಿ, ಕಾರ್ಯದರ್ಶಿ ಯೂಸುಫ್ ವಿಟ್ಲ, ಕೋಶಾಧಿಕಾರಿ ಕವಿತಾ ಉಪಸ್ಥಿತರಿದ್ದರು.

ಎಸ್.ಸಿ.ಎಸ್ ಪದವಿಪೂರ್ವ ಕಾಲೇಜ್ ಪ್ರಾಂಶುಪಾಲ ಡಾ| ಡಿ.ಶ್ರೀಪತಿ ರಾವ್ ಸ್ವಾಗತಿಸಿದರು. ಡಾ| ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು. ದ.ಕ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಅಧ್ಯಕ್ಷ ಕೆ.ಎಸ್ ಗಂಗಾಧರ ಆಳ್ವ ವಂದಿಸಿದರು.