ಸ್ವಿಜರ್ಲ್ಯಾಂಡಿನ ಅತಿ ದೊಡ್ಡ ನಗರ ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಭಾರತದ ನೀರಜ್ ಚೋಪ್ರಾ ಈ ಬಾರಿ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು. ಕಳೆದ ಬಾರಿ ಬಂಗಾರ ಬಾಚಿದ್ದರು.

ಜೆಕ್ ಗಣರಾಜ್ಯದ ಯಾಕೂಬ್ ವಡ್ಲೆಚ್ 85.86 ಮೀಟರ್ ದೂರ ಜಾವೆಲಿನ್ ಎಸೆದು ಸ್ವರ್ಣ ಸಂಪಾದಿಸಿದರು. ನೀರಜ್ ಚೋಪ್ರಾ 85.71 ಮೀಟರ್ ದೂರ ಎಸೆದರು. 85.04 ಮೀಟರ್ ದೂರ ಭಲ್ಲೆ ಎಸೆದ ಜರ್ಮನಿಯ ಜೂಲಿಯನ್ ವೆಬರ್ ಕಂಚು ಪದಕ ಗಳಿಸಿದರು.