ಮಂಗಳೂರು: ನಮ್ಮ ಬ್ಯಾಂಕು ಠೇವಣಿಗೆ 8 ಶೇಕಡಾದಷ್ಟು ಬಡ್ಡಿ ನೀಡಲು ತೀರ್ಮಾನಿಸಲಾಗಿದೆ. ಅಲ್ಲದೆ ನಿವೃತ್ತ ಸೈನಿಕರು, ಹಿರಿಯ ನಾಗರಿಕರು ಹಾಗೂ ಮಹಿಳೆಯರ ಠೇವಣಿಗೆ ವಿಶೇಷ ಬಡ್ಡಿ ದರ ನೀಡುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.

ಯಾವುದೇ ಅಡೆತಡೆ ಆಗದಂತೆ ಚಿನ್ನದ ಮೌಲ್ಯದ 90%  ಸಾಲ ಕಡಿಮೆ ಬಡ್ಡಿ ದರಕ್ಕೆ ಹಾಗೂ ಉತ್ತಮ ರೀತಿಯಲ್ಲಿ ಮನೆ ಸಾಲ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಎರಡು ವಾಹನ ಅಂದರೆ ಗಾಲಿ ಮೇಲಿನ ಬ್ಯಾಂಕನ್ನು ಕರ್ನಾಟಕದಲ್ಲಿ ಆರಂಭಿಸಿರುವುದು ನಮ್ಮ ಬ್ಯಾಂಕು ಮಾತ್ರ. ಸಮುಚ್ಚಯ ಕಟ್ಟುವ ಸ್ಥಳದಲ್ಲಿ ನಮ್ಮ ಸಿಬ್ಬಂದಿಯನ್ನು ಬಿಟ್ಟು ಸ್ಥಳದಲ್ಲೇ ಸಾಲ ಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ‌ರಾಜೇಂದ್ರ ಕುಮಾರ್ ಹೇಳಿದರು. ನಮ್ಮ ಸ್ವಂತ ಕಟ್ಟಡಗಳನ್ನು ಹೆಚ್ಚಿಸುತ್ತಿದ್ದು, ಸದ್ಯ ಅದಕ್ಕೆ 2 ಕೋಟಿ ರೂಪಾಯಿ ಹೂಡಲಾಗಿದೆ. ಎಟಿಎಂ ಹೆಚ್ಚಿಸಲು ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜೇಂದ್ರ ಕುಮಾರ್ ಹೇಳಿದರು.  ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರುಗಳು ಉಪಸ್ಥಿತರಿದ್ದರು.