ಹಾಸನ ಜಿಲ್ಲೆಯ ಹೊಳೆನರಸೀಪುರವನ್ನು ಕೇಂದ್ರವಾಗಿದ್ದ ಸಣ್ಣ ಭೂಕಂಪ ಒಂದು ಕೊಡಗಿನ ನಾನಾ ಕಡೆ ನಡುಗಿಸಿ ಆತಂಕ ಮೂಡಿಸಿದ್ದು ವರದಿಯಾಗಿದೆ.
ಮುಖ್ಯವಾಗಿ ಸೋಮವಾರಪೇಟೆ ತಾಲ್ಲೂಕಿನ ಕೆಲವೆಡೆ, ಮಡಿಕೇರಿ ತಾಲೂಕಿನ ದೇವಸ್ತೂರುಗಳಲ್ಲಿ ನೆಲನಡುಕ ಕೆಲವರ ಆತಂಕಕ್ಕೆ ಕಾರಣವಾಗಿತ್ತು.
ಇದು ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪವಾಗಿದ್ದು, ಎಲ್ಲೂ ಯಾರಿಗೂ ಹಾನಿಯುಂಟು ಮಾಡಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಸಂಸ್ಥೆಯ ವಿಜ್ಞಾನಿಗಳು ತಿಳಿಸಿದ್ದಾರೆ.