ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಗುಂಡ್ಯಡ್ಕದ ಎರುಗುಂಡಿ ಫಾಲ್ಸ್ ಇತ್ತೀಚೆಗೆ ಬಹಳಷ್ಟು ಕುಖ್ಯಾತಿ ಹೊಂದಲು ತಯಾರಾಗುತ್ತಿದೆ. ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ನೀರು ಬಹಳ ರಭಸವಾಗಿ ಬಂಡೆಗಲ್ಲಿನ ನಡುವೆ ಹರಿಯುವದು ಆಕರ್ಷಣೆ ಹೆಚ್ಚಾಗುವುದಕ್ಕೆ ಕಾರಣ. ಯಾರ ಅಡೆತಡೆ ಇಲ್ಲದೆ ಇರುವುದರಿಂದ ಸುಮಾರು 70-80 ಮಂದಿ ಪ್ರತೀ ದಿನ ಭೇಟಿ ಕೊಡುತ್ತಾರೆ. ರಜಾದಿನಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ಮಂದಿ ಬರುತ್ತಾರೆ ಎಂದು ಸ್ಥಳೀಯರು ತಿಳಿಸಿರುತ್ತಾರೆ. ಇಷ್ಟೊಂದು ಅಪಾಯಕಾರಿ ಸ್ಥಳಕ್ಕೆ ಸೂಕ್ತ ತಡೆ, ರಕ್ಷಣೆ ಇಲ್ಲದಿರುವುದು ಆತಂಕಕಾರಿಯಾಗಿದೆ. ಅಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳುವ ತುರ್ತು ಅಗತ್ಯವಿದೆ.