ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಮಾತೆಯರ, ಅಕ್ಕಂದಿರ ಅಶ್ಲೀಲ ಚಿತ್ರ, ವೀಡಿಯೋ ಇಟ್ಟುಕೊಂಡು ವಿಕೃತಿ ಮೆರೆದು, ಪವಿತ್ರ ಕೇಸರಿಗೆ ಕುತ್ತು ತಂದಿರುವ, ಊರು ಹೆಸರಿಗೆ ಕಳಂಕ ಕೆತ್ತಿರುವ, ಸುಮಿತ್ ರಾಜ್ ಪ್ರಕರಣವನ್ನು ಎಸ್.ಐ.ಟಿ. ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ನ ಸುಧೀರ್ ಕುಮಾರ್ ಮರೋಳಿ ಹಕ್ಕೊತ್ತಾಯದ ಆಗ್ರಹವನ್ನು ಸಾರ್ವಜನಿಕವಾಗಿ ಸಲ್ಲಿಸಿದರು.
ಜುಲೈ 15 ರಂದು ಮೂಡುಬಿದಿರೆ ರಾಜೀವ್ ಗಾಂಧಿ ಕಾಂಪ್ಲೆಕ್ಸ್ ನ ಎದುರು ಮಳೆಯನ್ನೂ ಲೆಕ್ಕಿಸದೆ ನಡೆದ ಹಕ್ಕೊತ್ತಾಯದ ಮೂಡುಬಿದಿರೆ ಮುಲ್ಕಿ ಕಾಂಗ್ರೆಸ್ ನೇತೃತ್ವದ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮಾಜಿ ಸಚಿವ ಅಭಯ ಚಂದ್ರ ಜೈನ್ ಹಾಗೂ ಇತರರು ಉಪಸ್ಥಿತರಿದ್ದು ಮೂಡುಬಿದಿರೆ ಠಾಣಾಧಿಕಾರಿಗೆ ಮನವಿಯನ್ನು ಅರ್ಪಿಸಿದರು.