ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ನೇತಾಜಿ ಬ್ರಿಗೇಡ್ ಇವರ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದೇರಳಕಟ್ಟೆ ಏನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ಚಿತ್ರಕಲಾ ಸ್ಪರ್ಧೆ ಹಾಗೂ ಅಂಗಾಂಗ ಧಾನ ಮಾಹಿತಿಯನ್ನು ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ದೀಪ ಬೆಳಗಿ ಉದ್ಘಾಟಿಸಿದರು.
ಕರಿಂಜೆ ಶ್ರೀ ಲಕ್ಷ್ಮಿ ಸತ್ಯನಾರಾಯಣ ವೀರಾಂಜನೇಯ ಕ್ಷೇತ್ರದ ಮುಕ್ತನಂದ ಸ್ವಾಮೀಜಿಯವರ ಆಶೀರ್ವಚನದಲ್ಲಿ ಇಂತಹ ಉತ್ತಮ ಸಾರ್ವಜನಿಕ ಕೆಲಸವನ್ನು ಮಾಡುತ್ತಿರುವ ನೇತಾಜಿ ಬ್ರಿಗೇಡ್ ತಂಡದವರನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಬ್ರಿಗೇಡ್ನ ಅಧ್ಯಕ್ಷ ದಿನೇಶ್ ಶೆಟ್ಟಿ, ಎಂ ಸಿ ಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಏನಪ್ಪಾ ಆಸ್ಪತ್ರೆಯ ಡಾ ಅಂಜನ್, ಜೀವ ಸಾರ್ಥಕತೆಯ ಸಂಯೋಜಕಿ ಶ್ರೀಮತಿ ಪದ್ಮಾವತಿ, ಪುರಸಭಾ ಸದಸ್ಯ ರಾಜೇಶ್ ನಾಯಕ್, ಬ್ರಿಗೇಡ್ ನ ಸ್ಥಾಪಕ ರಾಹುಲ್ ಕುಲಾಲ್ ಹಾಜರಿದ್ದರು.
ರಮ್ಯ ಸ್ವಾಗತಿಸಿದರು. ಅಭಿಷೇಕ್ ಸಾಲಿಯಾನ್ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಲ್ಲಿಸಿದರು.