ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಇಲ್ಲಿಗೆ ಸಮೀಪದ ಬೆಳವಾಯಿ ಸಹಕಾರಿ ವ್ಯಾಸಾಯಿಕ ಸಂಘದ ನೂತನ ಕಟ್ಟಡ ರೈತ ಸಿರಿ ಉದ್ಘಾಟಿಸಿ ಸಹಕಾರ ರತ್ನ, ರಾಜ್ಯ ಸಹಕಾರ ಮಾರಾಟ ಮಂಡಳಿಯ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಅಪೇಕ್ಸ್ ಬ್ಯಾಂಕಿನ ನಿರ್ದೇಶಕ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರು ರೈತ ಸಿರಿ ನೂತನ ಕಟ್ಟಡವನ್ನು ಉದ್ಘಾಟಿಸಿ 10 ಲಕ್ಷ ನೆರವನ್ನು ಘೋಷಿಸಿದರು.

ಗ್ರಾಹಕರು ಬಿಸಿಲಿನಿಂದ ಕಂಗೆಟ್ಟು ಬಂದಾಗ  ಹವಾ ನಿಯಂತ್ರಿತ ಕೋಣೆಯಲ್ಲಿ ಅವರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟು ಅವರ ಉದ್ಧಾರ ಅಭಿವೃದ್ಧಿಯನ್ನು ಮಾಡುತ್ತಿದ್ದೇವೆ. ಮಹಿಳೆಯರಿಗೂ ಕೂಡ ಸ್ವಸಹಾಯ ಸಂಘದ ಮೂಲಕ ಸಾಲವನ್ನು ನೀಡಿದ ಕಾರಣ ಅವರೆಲ್ಲರ ಪ್ರೋತ್ಸಾಹದಿಂದ ಸಹಕಾರಿ ಸಂಘಗಳು ಇಂದು ಸಾಕಷ್ಟು ಅಭಿವೃದ್ಧಿಯನ್ನು ಕಂಡಿವೆ ಎಂದು ತಿಳಿಸಿದರು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಭಾಷೆ ಬರದವರು ಉದ್ಯೋಗಿಗಳಾಗಿ ಇರುವದು ಕೂಡ ಸಹಕಾರ ಸಂಘಗಳು ಬೆಳೆಯಲು ಪರೋಕ್ಷವಾಗಿ ಸಹಕರಿಸಿದೆ ಎಂದು ನೆನಪಿಸಿಕೊಂಡ ರು.

ಹವಾನಿಯಂತ್ರಿತ ಬ್ಯಾಂಕಿಂಗ್ ಕಚೇರಿಯನ್ನು ಉದ್ಘಾಟಿಸಿ, ಮೂಡು ಮಾರ್ನಾಡು ಹಾಲು ಉತ್ಪಾದಕರ ಸಂಘದ ಶಶಿಕಲಾ ರಾವ್ ಅವರಿಗೆ ಬೆಂಕಿನಿಂದ ಕಂಪ್ಯೂಟರನ್ನು ಕೊಡುಗೆಯಾಗಿ ನೀಡಿ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಶುಭ ಹಾರೈಸಿದರು.

ಮೂರು ನವೋದಯ ಸಂಘಗಳಿಗೆ ನಿರ್ಣಯ ಹಾಗೂ ಇತರ ಪುಸ್ತಕಗಳನ್ನು ವಿತರಿಸಿ ಮಾಜಿ ಮಂತ್ರಿ ಅಭಯ ಚಂದ್ರ ಜೈನ್ ಶುಭ ಹಾರೈಸಿದರು.

ರೈತರು, ಗ್ರಾಮೀಣರನ್ನು ಅಭಿವೃದ್ಧಿ ಮಾಡಿದ ಕಾರಣದಿಂದಾಗಿ ಸಹಕಾರಿ ಕ್ಷೇತ್ರವು ಕೂಡ ಅಭಿವೃದ್ಧಿಯಾಗುತ್ತಿದೆ ಎಂದು ಕೆಎಂಎಫ್ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ ಪಿ ಸುಚರಿತ ಶೆಟ್ಟಿಯವರು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಭಾಸ್ಕರ್ ಎಸ್ ಕೋಟ್ಯಾನ್ ಮಾತನಾಡಿ 68 ವರ್ಷಗಳ ಈ ಬ್ಯಾಂಕು ಪ್ರಸ್ತುತ 101ಕೋಟಿ ವ್ಯವಹಾರವನ್ನು ಕುದುರಿಸಿಕೊಂಡಿದೆ. 26 ಕೋಟಿ ಇದ್ದ ಸಾಲ ಇದೀಗ 98 ಕೋಟಿಗೆ ಬೆಳೆದಿದೆ. 5 ಬ್ರಾಂಚ್ ಗಳಿಂದ 444 ಕೋಟಿ ವ್ಯವಹಾರ ನಡೆಯುತ್ತಿದೆ. ನಬಾರ್ಡ್ ನಿಂದ ರೂ.95 ಲಕ್ಷ ಸಹಾಯಧನ ದೊರಕಿದರಿಂದ ಈ ಕಟ್ಟಡವನ್ನು ರಚಿಸಲು ಸಾಧ್ಯವಾಯಿತು. ಪ್ರಸ್ತುತ 20 ಮಂದಿ ಸಿಬ್ಬಂದಿಗಳು, 9 ಮಂದಿ ನಿರ್ದೇಶಕರು, 7,000 ಮೆಂಬರ್ ಗಳಿಂದ ಸಂಘ ಮುನ್ನಡೆಯುತ್ತಿದೆ ಎಂದು ನೆನಪಿಸಿಕೊಂಡರು. 

ಇದೇ ಸಂದರ್ಭದಲ್ಲಿ ಕಟ್ಟಡದ ನಿರ್ಮಾಣಕ್ಕೆ ಕಾರಣರಾದ ಬಿಲ್ಡರ್ ಸಂದೀಪ್ ಶೆಟ್ಟಿ, ಇಂಜಿನಿಯರ್ ಹರೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು

ವೇದಿಕೆಯಲ್ಲಿ ಸಹಕಾರ ಸಂಘದ ಉಪ ನಿಬಂಧಕ ಎಚ್ಎನ್ ರಮೇಶ್,ಸಹಾಯಕ ನಿಬಂಧಕ ಸುಧೀರ್ ಕುಮಾರ್,ಉದ್ಯಮಿ ಅಬ್ದುಲ್ ಸಲೀಂ, ಬ್ಲೋಜಮ್ ಶಾಲೆಯ ಸಂಸ್ಥಾಪಕ ಸೈಮನ್ ಮಾಸ್ಕರೇನಸ್, ಬೆಳುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಪೂಜಾರಿ, ಬೇಂಕಿನ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್, ಆಡಳಿತ ಮಂಡಳಿ ನಿರ್ದೇಶಕರುಗಳಾದ ಉಷಾ ಡಿ ಪೈ, ದಾಮೋದರ ಎಸ್ ಬಂಗೇರ, ಅಂಬಿಕಾ ಡಿ ಶೆಟ್ಟಿ, ಶಂಕರ ಶೆಟ್ಟಿ, ಜಾನ್ ಎಫ್ ನಜರತ್, ಸುಧಾಕರ ಶೆಟ್ಟಿ, ಶ್ರೀನಾಥ ಸುವರ್ಣ, ಅಭಿನಂದನ್ ಬಲ್ಲಾಳು, ಪ್ರಭಾಕರ ಜಿ, ಸಂಜಯ್ ಅಧಿಕಾರಿ ಹಾಗೂ ಇತರರು ಹಾಜರಿದ್ದರು.

ಅಭಿನಂದನ್ ಬಲ್ಲಾಳ್ ಸ್ವಾಗತಿಸಿದರು. ಭಾಸ್ಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿ ಪ್ರತಿಮಾ ವಂದಿಸಿದರು.