ಪುತ್ತೂರು : ವಿದ್ಯಾರ್ಥಿಗಳಿಗೆ ಸರಿಯಾದದಾರಿಯನ್ನು ತೋರಿಸಿ ಅವರಜೀವನವನ್ನುರೂಪಿಸುವ ಗುರುತರ ಹೊಣೆ ಶಿಕ್ಷಕರದ್ದು. ಇದು ತಲೆಮಾರುಗಳ ನಿರ್ಮಾಣದಅತ್ಯಂತ ಪವಿತ್ರದಕಾರ್ಯ. ಅಂಥ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಧನ್ಯತೆ ಮೂಡುತ್ತದೆ ಎಂದು ಮಾಯಿದೆದೆವುಸ್ ಶಿಕ್ಷಣ ಸಂಸ್ಥೆUಳ ಸಂಚಾಲಕರಾದ ವಂ| ಲಾರೆನ್ಸ್ ಮಸ್ಕರೆನ್ಹಸ್‍ಹೇಳಿದರು. ವೃತ್ತಿಯಿಂದ ನಿವೃತ್ತರಾದ ಪ್ರೊ.ಜಾನ್ ಬಿ ಸಿಕ್ವೆರಾ, ಡಾ.ಪ್ರಸನ್ನರೈ ಮತ್ತು ಪ್ರೊ. ಮೀನಾಕ್ಷಿ ಅವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

ಈ ಮೂವರು ಶಿಕ್ಷಣ ರಂಗಕ್ಕೆ  ಮೂರು ದಶಕಗಳಿಗೂ ಮಿಕ್ಕಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಅವರಕರ್ತವ್ಯ ಬದ್ಧತೆ,  ನೇರ ನಡೆ ನುಡಿ ವಿದ್ಯಾರ್ಥಿಗಳ ಮನ ಗೆದ್ದ ಅಂಶಗಳು ಎಂದುಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೋ ಹೇಳಿದರು.  

ಸಸ್ಯ ಶಾಸ್ತ್ರ ವಿಭಾಗ ಮುಖ್ಯಸ್ಥೆ ಶಶಿಪ್ರಭಾ ಅವರು ಡಾ. ಪ್ರಸನ್ನ ರೈ ಅವರಿನ್ನು,  ಪ್ರಾಣಿಶಾಶ್ತ್ರ ವಿಭಾಗ ಮುಖ್ಯಸ್ಥ ಪ್ರೊ. ನಾಗರಾಜ್‍ ಅವರು ಪ್ರೊ.ಮೀನಾಕ್ಷಿ ಅವರನ್ನು,  ಮತ್ತು ಇತಿಹಾಸ ಪ್ರಾದ್ಯಾಪಕ ಡಾ. ನೊರ್ಬರ್ಟ್ ಲೊಬೊ ಅವರು ಪ್ರೊ.ಜಾನ್ ಬಿ ಸಿಕ್ವೆರಾ ಅವರಿಗೆ ಶುಭಾಸಂಶನೆ ಸಲ್ಲಿಸಿ ಸನ್ಮಾನ ಮಾಡಿದರು. ನಿವೃತ್ತ ಪ್ರಾಧ್ಯಾಪಕರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. 

ಕ್ಯಾಂಪಸ್‍ ಡೈರೆಕ್ಟರ್ ವಂ| ಸ್ಟ್ಯಾನಿ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಟಾಫ್ ಎಸೊಸಿಯೇಶನ್ ಅಧ್ಯಕ್ಷರಾದ ಪ್ರೊ. ಝುಬೇರ್ ಸ್ವಾಗತಿಸಿದರು. ಪ್ರೊ. ವೆಂಕಟೇಶ್ವರಿ ವ0ದಿಸಿದರು. ಲವಿನಾ ಲ್ಯಾನ್ಸಿ ಪಿಂಟೋ ನಿರ್ವಹಿಸಿದರು.