ಮೂಡುಬಿದ್ರೆ: ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ 108 ನೆ ವರ್ಷದ ಮೊಸರು ಕುಡಿಕೆ ಉತ್ಸವದ ಸಂದರ್ಭದಲ್ಲಿ ನಡೆಯುವ ಕೃಷ್ಣೋತ್ಸವದ 2024 ಕಾರ್ಯಕ್ರಮದ ಪ್ರಯುಕ್ತ ಮೊದಲ ಕರಪತ್ರ ಜೊತೆ ಫಲ ಪುಷ್ಪ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಶ್ರೀ ಹನುಮಂತ ದೇವಸ್ಥಾನದಲ್ಲಿ ಸಮರ್ಪಿಸಲಾಯಿತು.
ಶ್ರೀ ಗೋಪಾಲಕೃಷ್ಣ ದೇಗುಲದ ಆಡಳಿತ ಮುಖ್ಯಸ್ಥರು ಶ್ರೀ ಗುರುಪ್ರಸಾದ್ ಹೊಳ್ಳ , ಶ್ರೀ ಗೋಪಾಲಕೃಷ್ಣ ದೇವಲದ ಅರ್ಚಕರಾದ ಶ್ರೀ ರಾಘವೇಂದ್ರ ಭಟ್, ಶ್ರೀ ಹನುಮಂತ ದೇವಸ್ಥಾನದ ಅರ್ಚಕರಾದ ಶ್ರೀ ನಾಗೇಂದ್ರ ಭಟ್, ಸಂಘಟನೆಯ ಅಧ್ಯಕ್ಷರಾದ ಅಮರ್ ಕೋಟೆ, ಸಂಚಾಲಕ ನಾರಾಯಣ ಪದುಮಲೆ, ಟ್ರಸ್ಟಿ ರಂಜಿತ್ ಶೆಟ್ಟಿ, ಕೋಶಾಧಿಕಾರಿ ಗಣೇಶ್ ಪೈ ಸೇವಾ ಪ್ರಮುಖ್ ಸಂಪತ್ ಪೂಜಾರಿ, ರಕ್ತ ನಿಧಿ ಪ್ರಮುಖ ಮನು ಎಸ್ ಒಂಟಿಕಟ್ಟೆ, ಪ್ರಮುಖರುಗಳಾದ ಶ್ರೀಮತಿ ಸುಕನ್ಯಾ, ವಿಶ್ವಾಸ್ ಉಪಸ್ಥಿತರಿದ್ದರು.