1935ರಲ್ಲಿ ಅಸ್ತಿತ್ವಕ್ಕೆ ಬಂದ ಉಡುಪಿ ನಗರ ಸಭೆಯು ವಿಶಾಲ ವ್ಯಾಪ್ತಿಯ ಭಾಗ್ಯ ಪಡೆಯುವ ಭಾಗ್ಯ ಕೂಡಿ ಬಂದಿದ್ದು ಅದಕ್ಕೆ ಬೇಕಾದ ಕಾಗದದ ಕೆಲಸಗಳೆಲ್ಲ ನಡೆಯುತ್ತಿದ್ದು ಹಳೆಯ ತಾಲೂಕು ಕಚೇರಿ ಜಾಗದಲ್ಲಿ ಹೊಸ ನಗರ ಸಭೆ ಮೇಲೇಳಲಿದೆ.

ಹಳೆಯ ತಾಲೂಕು ಕಚೇರಿ ನಿರುಪಯುಕ್ತವಾಗಿದ್ದು ಬಳಕೆಯಲ್ಲಿಲ್ಲ. ಅಲ್ಲಿನ 96 ಸೆಂಟ್ಸ್ ಜಾಗದಲ್ಲಿ ನಗರಸಭೆ ಕಟ್ಟಡ, ಕಾನ್ಫರೆನ್ಸ್ ಹಾಲ್, ಶಾಪಿಂಗ್ ಕಾಂಪ್ಲೆಕ್ಸ್, ವಿಶಾಲ ಪಾರ್ಕಿಂಗ್ ವ್ಯವಸ್ಥೆ ಎಲ್ಲ ಆಗಲಿದೆ.

1970ರವರೆಗೂ ಉಡುಪಿ ನಗರ ಸಭೆಯು ತೇರು ಬೀದಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಇತ್ತು. ಅನಂತರ ಈಗಿನ ಕಟ್ಟಡ ಆಗಿದೆ. ಇಲ್ಲಿ ಎಲ್ಲದಕ್ಕೂ ಅವಕಾಶ ಮಾಡಲಾಗಿದೆ ಆದರೂ ಇಕ್ಕಟ್ಟಾಗಿದೆ. 1995ರಲ್ಲಿ ಮಲ್ಪೆ, ಮಣಿಪಾಲ ಮೊದಲಾದ ಐದು ಪಂಚಾಯತಿಗಳು ನಗರ ಸಭೆಗೆ ಸೇರಿದ ಮೇಲೆ ಇದು ಕಿಷ್ಕಿಂದೆಯಾಗಿದೆ.

ಜಿಲ್ಲಾ ಉಸ್ತುವಾರಿ ಮಂತ್ರಿ ಎಸ್. ಅಂಗಾರ ಅವರ ಹೊಸ ಕಟ್ಟಡಕ್ಕೆ ಬೇಕಾಗುವ ಎಲ್ಲ ಕಾಗದ ಪತ್ರ ಪಡೆದಿದ್ದು ಮಂತ್ರಿ ಮಂಡಲದ ಅನುಮೋದನೆಗೆ ಒಯ್ದಿದ್ದಾರೆ.

ಮುಂದಿನ ತಿಂಗಳು ಹೊಸ ಕಟ್ಟಡಕ್ಕೆ ತಳ ಅಗೆಯುವ ಕೆಲಸ ಆರಂಭವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.