ಉಳ್ಳಾಲ ತಾಲೂಕಿನ ಹರೇಕಳದಿಂದ ಅಡ್ಯಾರ್ ದೇಶೀಯ ಹೆದ್ದಾರಿ 75ನ್ನು‌ ಸಂಪರ್ಕಿಸುವ ಸೇತುವೆಯಲ್ಲಿ ಲಘು ವಾಹನಗಳ ಸಂಚಾರ ಏಪ್ರಿಲ್ 1ರ ಶನಿವಾರದಿಂದ ಆರಂಭವಾಯಿತು.

ಈ ಅಣೆಕಟ್ಟು ಮತ್ತು ಸೇತುವೆಗೆ  ಶಾಸಕ ಯು. ಟಿ. ಖಾದರ್ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ 2018ರಲ್ಲಿ  ಮಂಜೂರಾತಿ ಪಡೆದಿದ್ದರು. ಈಗ ಚುನಾವಣೆ ನೀತಿ ಸಂಹಿತೆ ಕಾರಣ ಉದ್ಘಾಟನೆ ಏನಿದ್ದರೂ ಚುನಾವಣೆಯ ಬಳಿಕ. ಈಗ ಸಂಚಾರ ಮುಕ್ತ ಮಾಡುವಂತೆ ಶಾಸಕ ಖಾದರ್ ಅಧಿಕಾರಿಗಳಿಗೆ ಸೂಚಿಸಿದ್ದರು.

ಪಶ್ಚಿಮ ವಾಹಿನಿಯಲ್ಲಿ ಅತಿ ದೊಡ್ಡ 195.50 ಕೋಟಿ ವೆಚ್ಚದ ಅಣೆಕಟ್ಟು, ಸೇತುವೆ ಇದು. ಅಣೆಕಟ್ಟು ನೀರನ್ನು ಉಳ್ಳಾಲ ಕಡೆಗೆ ಮೀಟರ್ ಅಳವಡಿಸಿ ಮನೆಮನೆಗೆ ಪೂರೈಸುವ ಯೋಜನೆ ಆಗುತ್ತಿದೆ.

530 ಮೀಟರ್ ಉದ್ದ, 10.6 ಮೀಟರ್ ಎತ್ತರ, 10 ಮೀಟರ್ ಅಗಲದ ಈ ಸೇತುವೆಯಲ್ಲಿ ಘನ ವಾಹನಗಳಿಗೆ ಅವಕಾಶವಿಲ್ಲ. ಅಣೆಕಟ್ಟು ಕೆಲಸ ಕೊನೆಯ ಹಂತದಲ್ಲಿದೆ ಎಂದೂ ತಿಳಿದು ಬಂದಿದೆ.