ಗುರುವಾರ, ಶುಕ್ರವಾರ ಸುರಿದ ಭಾರೀ ಮಳೆಯಿಂದ ದಿಲ್ಲಿಯ ಕೆಲವು ರಸ್ತೆಗಳು ದೋಣಿ ಸಂಚಾರಕ್ಕೆ ಮಾತ್ರ ಯೋಗ್ಯ ಎನಿಸಿದವು. ಹಿಮಾಚಲ ಪ್ರದೇಶದಲ್ಲಿ ಮಳೆಯ ಜೊತೆಗೆ ಹಿಮಪಾತದಿಂದಾಗಿ 11 ಪ್ರಮುಖ ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು.
ದಿಲ್ಲಿಯಲ್ಲಿ ಗುರುವಾರ ಮಳೆಯಿಂದಾಗಿ 22 ಮತ್ತು ಶುಕ್ರವಾರ ಕೆಲವು ವಿಮಾನಗಳನ್ನು ಬೇರೆ ವಾಯು ಮಾರ್ಗವಾಗಿ ಕಳುಹಿಸಲಾಯಿತು. ಯಮುನಾ ನಗರ, ಕರ್ನಾಲ್, ಅಸಾಂದ್, ರೋಹಕ್, ನಸಿಯಾಬಾದ್‌ಗಳು ಭಾರೀ ಮಳೆ ಕಂಡವು.
ಶನಿವಾರವೂ ಮಳೆಯ ಸೂಚನೆಯನ್ನು ಐಎಂಡಿ- ಭಾರತೀಯ ಹವಾಮಾನ ಇಲಾಖೆ ಮುಂಗಂಡಿದೆ. ಐಎಂಡಿ ಪ್ರಕಾರ ಏಪ್ರಿಲ್ 1 ಮತ್ತು 2ರಂದು ಹಿಮಪಾತದ ಅಪಾಯವಿದೆ. ಈಗಾಗಲೇ ಹಿಮಪಾತದ ಕಾರಣಕ್ಕೆ ಎನ್ಎಚ್ 3, ಎನ್ಎಚ್ 505 ಸೇರಿ 11 ಪ್ರಮುಖ ರಸ್ತೆಗಳಲ್ಲಿ ಸಂಚಾರ ತಡೆಹಿಡಿಯಲಾಗಿದೆ.a