ಯುಎಸ್‌ಎಯ ನಾಸಾವು ಮಂಗಳನಲ್ಲಿ ಮಾನವನನ್ನು ಇಳಿಸುವ ತನ್ನ ಮಹತ್ವಾಕಾಂಕ್ಷಿ ಯೋಜನೆಗೆ ಭಾರತ ಮೂಲದ ಅಮಿತ್ ಕ್ಷತ್ರಿಯಾರನ್ನು ಮುಖ್ಯಸ್ಥರಾಗಿ ನೇಮಿಸಿದೆ.

ನಾಸಾದಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದ ಅವರಿಗೆ ಇದು ದೊಡ್ಡ ಸವಾಲು. ಉಪಗ್ರಹ ಚಂದ್ರನಲ್ಲಿ ಮಾನವನ ಪಾದ ಮೂಡಿಸಿದ್ದ ನಾಸಾಕ್ಕೆ ಮಂಗಳನಲ್ಲಿ ಮಾನವ ಪಾದ ಊರಿಸುವ ಆಸಕ್ತಿ ಇದೆ. ಅದು ಇನ್ನಾದರೂ ಕಾರ್ಯ ರೂಪಕ್ಕೆ ಬಂದೀತು ಎಂದು ಆಶಿಸಲಾಗಿದೆ.