ಬ್ಯಾಂಕಾಕಿನಿಂದ ಮುಂಬಯಿಗೆ ಬರುವ ಇಂಡಿಗೋ ವಿಮಾನದಲ್ಲಿ ‌ಸಿಬ್ಬಂದಿ ಜೊತೆಗೆ ಅಸಭ್ಯವಾಗಿ ನಡೆದುಕೊಂಡ ಎಂದು ಸ್ವೀಡನ್ನಿನ ಕ್ಲಾಸ್ ಎರಿಕ್ ಹೆರಾಲ್ಡ್ ಜೋನಾಸ್ ವೆಸ್ಟ್‌ಬರ್ಗ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಳೆದ ಮೂರು ತಿಂಗಳುಗಳಲ್ಲಿ ಈ‌ ರೀತಿಯ ಎಂಟನೆಯ ಪ್ರಯಾಣಿಕನ ಬಂಧನವಿದು ಎಂದು ಹೇಳಲಾಗಿದೆ.

ಕೋಳಿ ಊಟ ಕೊಟ್ಟಾಗ ಮೀನೂಟ ಇಲ್ಲವೇ ಎಂದು ಕೇಳಿದ ಕುಡಿದ ಅಮಲಿನಲ್ಲಿದ್ದ ಆ ವ್ಯಕ್ತಿ ಅನಂತರ 24ರ ಪ್ರಾಯದ ಸಿಬ್ಬಂದಿಗೆ ಕಿರುಕುಳ ನೀಡಿದ ಎಂದು ದೂರಲಾಗಿದೆ. ಕ್ಯಾಪ್ಟನ್‌ಗೆ ಸಿಬ್ಬಂದಿ ದೂರಿದ್ದರಿಂದ ಸದರಿ ಪ್ರಯಾಣಿಕನಿಗೆ ಒಮ್ಮೆ ಕೆಂಪು ಕಾರ್ಡ್ ತೋರಲಾಯಿತು ಹಾಗೂ ಮುಂಬಯಿಯಲ್ಲಿ ಇಳಿಯುತ್ತಲೇ ಪೋಲೀಸರಿಗೆ ಒಪ್ಪಿಸಲಾಯಿತು.

ಆದರೆ ಒಂದು ಕಾಯಿಲೆಯಿಂದ ಬಳಲುವ ಆರೋಪಿ 63ರ ವಕೀಲ ಮೈ ನಡುಗುವ ತೊಂದರೆ ಅನುಭವಿಸುತ್ತಿದ್ದ. ಹಾಗಾಗಿ ಸಿಬ್ಬಂದಿಯ ಕೈ ಹಿಡಿದುಕೊಂಡ, ಮೈಮೇಲೆ ವಾಲಿದ ಎಂದು ಅಂತಿಮವಾಗಿ ಹೇಳಲಾಗಿದೆ.