ಅಮೆರಿಕ ಸಂಯುಕ್ತ ಸಂಸ್ಥಾನದ ಜಾರ್ಜಿಯಾದ ಎಸೆಂಬ್ಲಿಯು ಹಿಂದೂಪೋಬಿಯಾ ಖಂಡಿಸಿ ನಿರ್ಣಯ ತೆಗೆದುಕೊಂಡಿತು. ಹಾಗೆ ನಿರ್ಣಯ ತೆಗೆದುಕೊಂಡ ಅಮೆರಿಕದ ಮೊದಲ ರಾಜ್ಯ ಜಾರ್ಜಿಯಾ.

ಜಾರ್ಜಿಯಾದ ಅಟ್ಲಾಂಟಾ ಹೆಚ್ಚು ಹಿಂದೂಗಳು ಇರುವ ಪ್ರದೇಶ. ಇಲ್ಲಿನ ಹೊರ ವಲಯದ ಜನಪ್ರತಿನಿಧಿ ಲಾರೆನ್ ಮೆಕ್‌ಡೊನಾಲ್ಡ್ ನಿರ್ಣಯ ಮಂಡಿಸಿ ಅದು ಪಾಸಾಯಿತು. 100 ದೇಶಗಳಲ್ಲಿ 120 ಕೋಟಿ ಜನರು ಇರುವ ಹಿಂದೂ ಧರ್ಮವು ಶಾಂತಿ ಮತ್ತು ಸೌಹಾರ್ದದ್ದು. ಅಲ್ಲಿ ಹಿಂದೂಪೋಬಿಯಾಕ್ಕೆ ಎಡೆಯಿಲ್ಲ ಎಂದು ಹೇಳಲಾಯಿತು.

ಅಮೆರಿಕದ ಸಮಾಜದಲ್ಲಿ ಒಂದಾಗಿರುವ ಭಾರತೀಯ ಹಿಂದೂಗಳು ಯುಎಸ್‌ಎ ಜ್ಞಾನ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಈಗ ಹಿಂದೂಪೋಬಿಯಾ ಅಮೆರಿಕದಲ್ಲಿ ಮುಖ್ಯವಾಗಿ ಹಿಂದೂ ಸಿಖ್ ತಿಕ್ಕಾಟಕ್ಕೆ ಕಾರಣವಾಗಿದೆ ಎನ್ನುವುದನ್ನು ನಿರ್ಣಯದಲ್ಲಿ ಖಂಡಿಸಲಾಯಿತು.