ಮೊಹವ್ಕ್ ಅಮೆರಿಂಡಿಯನ್ ಬುಡಕಟ್ಟು ಜನರ ಪ್ರದೇಶದಲ್ಲಿ ಕೆನಡಾದಿಂದ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಅಕ್ರಮವಾಗಿ ಪ್ರವೇಶಿಸಲು ಹೋದ ಆರು ಮಂದಿಯ ಎರಡು ಕುಟುಂಬಗಳು ಜವುಗು ಪ್ರದೇಶದಲ್ಲಿ ಬೋಟು ಮುಳುಗಿ ಸಾವಿಗೀಡಾಗಿದ್ದಾರೆ.

ಅವರು ಕೆನಡಾದ ಪಾಸ್‌ಪೋರ್ಟ್ ಹೊಂದಿದ್ದರು. ಪೋಲೀಸು ಮುಳುಗುಗಾರರು ಶವವನ್ನು ಹೊರಕ್ಕೆ ಎತ್ತಿದ್ದಾರೆ. ಗಡಿ ದಾಟಿದರೆ ಅವರನ್ನು ‌ನ್ಯೂಯಾರ್ಕ್ ತಲುಪಿಸುವ ಏಜೆಂಟರು ಇರುತ್ತಾರೆ. ಆದರೆ ಅಪರಿಚಿತ ಸ್ಥಳದಲ್ಲಿ ಸಾಕಷ್ಟು ಜನ ಸಾವು ಕಾಣುತ್ತಾರೆ ಎಂದು ಉಪ ಪೋಲೀಸು ಮುಖ್ಯಸ್ಥರಾದ ಲೀ ಆನ್ ಓಬ್ರಿಯಾನ್ ಹೇಳಿದ್ದಾರೆ.