ಮಂಗಳೂರು: ಇಲ್ಲಿನ ಸುಮಾ ಸಧನ ಮಲ್ಲಿಕಟ್ಟೆಯ ಸಭಾಂಗಣದಲ್ಲಿ ಮಂಗಳೂರಿನಾದ್ಯಂತ ನೂರಾರು ಮಂಗಳಮುಖಿಯರು ಜೆಡಿಎಸ್ ನಾಯಕಿ ಡಾ.‌ ಸುಮತಿ ಎಸ್ ಹೆಗ್ಡೆಯವರ ಸಮ್ಮುಖದಲ್ಲಿ ನಿಷಾ ಅವರ ನಾಯಕತ್ವದಲ್ಲಿ ಪಕ್ಷ ಸೇರ್ಪಡೆಗೊಂಡರು.  

ಈ ಸಂಧರ್ಭ ಜೆಡಿಎಸ್ ಪಕ್ಷದ ನಾಯಕಿಯರಾದ ಭಾರತೀ ಪುಷ್ಪರಾಜನ್, ಕವಿತಾ, ಆಶಾ ಸುಜ್ನೇಷ್, ಶಾರದಾ ಶೆಟ್ಟೆ, ಸುನೀತಾ,  ಜೆಡಿಎಸ್ ಮಂಗಳೂರು ದಕ್ಷಿಣ ಪಧಾಧಿಕಾರಿಗಳಾದ ಅಲ್ತಾಫ್ ತುಂಬೆ , ಸಲೀಂ ಜಾವೇದ್, ದಿನೇಶ್ ಪಯಿಸ್, ಜಯರಾಂ, ಮನೋಜ್ ಕುಮಾರ್ ಹಾಗೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು. 

ಈ ಸಂಧರ್ಭ ಕೆಳವು  ಸದಸ್ಯೆಯರು ತಮ್ಮ ಅನುಭವವನ್ನು ಹಂಚುತ್ತಾ ಡಾ. ಸುಮತಿ ಎಸ್ ಹೆಗ್ಡೆಯವರ ಆತ್ಮೀಯತೆ , ಸ್ನೇಹ, ಹಾಗೂ ಸೇವೆಯ ಬಗ್ಗೆ ಪ್ರಸ್ತಾಪಿಸಿ ಇಂತಹ ವೇದಿಕೆ ನೀಡಿದ ಬಗ್ಗೆಯೂ  ಮುಕ್ತಕಂಠದಿಂದ ಶ್ಲಾಘಿಸಿದರು. ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ ಮಂಗಳಮುಖಿ ಸದಸ್ಯೆಯರು , ಡಾ.‌ ಸುಮತಿ‌ ಎಸ್ ಹೆಗ್ಡೆ ಗೆದ್ದು ಬಂದಲ್ಲಿ ತಮಗೆ ಶಾಶ್ವತ ನಿವೇಶನ ನೀಡುವ ಬಗ್ಗೆ ಅವಹಾಲು ಸಲ್ಲಿಸಿರುವ ವಿಚಾರಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿದ ಜೆಡಿಎಸ್ ಪಕ್ಷದ ಅಭ್ಯರ್ಥಿಯ ಬಗ್ಗೆ ಮೆಚ್ಷುಗೆಯ‌ನ್ನು ವ್ಯಕ್ತಪಡಿಸಿ, ಪಕ್ಷದ ಪರವಾಗಿ ಕೆಳಸ ಮಾಡುವುದಾಗಿಯೂ ವಿವರಿಸಿದರು. ಕಳೆದ ಬಾರಿ ಬಿಜೆಪಿಗೆ ಮತನೀಡಿ , ಗೆದ್ದ ನಂತರ ಕಡೆಗಣಿಸಿದ  ಶಾಸಕನ ಬಗ್ಗೆ ಆಕ್ರೋಶಗೊಂಡು , ಬಹಳ ಭಾವುಕರಾಗಿ ನುಡಿದರು.‌ಪಕ್ಷದ ತತ್ವ ಸಿಧ್ದಾಂತವನ್ನು ಒಪ್ಪಿಕೊಂಡು ಬಂದ ಕಾರ್ಯಕರ್ತೆಯರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಡಾ.‌ ಸುಮತಿ ಎಸ್ ಹೆಗ್ಡೆ ಪಕ್ಷದ ಧ್ವಜ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಪ್ರಿಯಾ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ವಿನ್ಸೆಂಟ್ ಪೆರೇರಾ ಧನ್ಯವಾದಗೈದರು.