ಬಂಟ್ವಾಳ: ಲೋರೆಟ್ಟೋ ಮಾತಾ ಚರ್ಚ್ ನಲ್ಲಿ ಗರಿಗಳ ಭಾನುವಾರ ವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು. ಈದರೊಂದಿಗೆ ಪವಿತ್ರ ವಾರಕ್ಕೆ ಅತ್ಯಂತ ಭಕ್ತಿ ಪೂರ್ವಕವಾಗಿ ಆರಂಭ ನೀಡಲಾಯಿತು. ಲೊರೆಟ್ಟೊ ಶಾಲಾ ವಠಾರದಲ್ಲಿ ಆರಂಭಗೊಂಡ ಪ್ರಾರ್ಥನಾ ವಿದಿಯ ಮೆರವಣಿಗೆಯಲ್ಲಿ ನೂರಾರು ಭಕ್ತಾದಿಗಳು, ಮಕ್ಕಳು ಭಕ್ತಿಯಿಂದ ಪಾಲ್ಗೊಂಡು, ಚರ್ಚ್ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ ಪ್ರಾರ್ಥನಾ ವಿಧಿ ಹಾಗೂ ಪ್ರಧಾನ ಧರ್ಮಗುರುಗಳಾಗಿ ವಂ ಜೇಸನ್ಪ ಮೊನಿಸ್ ರವರು ಪವಿತ್ರ ಬಲಿ ಪೂಜೆಯನ್ನು ಭಕ್ತಾದಿಗಳೊಂದಿಗೆ ಅರ್ಪಿಸಿದರು.
ಚರ್ಚ್ ಪಾಲನಾ ಮಂಡಳಿ ಮೇಲುಸ್ತುವಾರಿ ವಹಿಸಿತ್ತು. ತಪಸ್ಸು ಕಾಲದಲ್ಲಿ spiritual renewal ಗೊಸ್ಕರ ಮೂರು ದಿನಗಳ ದ್ಯಾನಕೂಟವನ್ನು ಸೋಮವಾರದಿಂದ ಬುಧವಾರ ತನಕ ಸಂಜೆ 4.00 ರಿಂದ 8:00 ವರೆಗೆ ಶಿವಮೊಗ್ಗ ಧರ್ಮ ಪ್ರಾಂತ್ಯದ ವಂದನಿಯ ರೋಮನ್ ಪಿಂಟೊ ರವರು ನಡೆಸಿಕೊಡಲಿದ್ದಾರೆ.