ಉಡುಪಿ, ಉಡುಪಿಯ ಅಜ್ಜರಕಾಡಿನಲ್ಲಿ ದಲಿತರು, ರೈತರು, ಕಾರ್ಮಿಕರು, ಬುದ್ಧಿಜೀವಿಗಳು ಮೊದಲಾದವರ ಕೂಡಿಕೆಯಲ್ಲಿ ಸಾಮರಸ್ಯದ ನಡಿಗೆ, ಸೌಹಾರ್ದದ ಕಡೆಗೆ ಮೇ 14ರ ಮಧ್ಯಾಹ್ನ ಎರಡು ಗಂಟೆಗೆ ಉದ್ಘಾಟನೆ ಕಂಡಿತು.

ರೈತ ನಾಯಕ ಚಾಮರಸ ಮಾಲಿ ಪಾಟೀಲ್, ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್, ಅನುಪಮ ಪತ್ರಿಕೆ ಸಂಪಾದಕಿ ಸಬಿಹಾ, ನೀಲಾ ಮೊದಲಾದವರು ಮಾತನಾಡಿದರು.

ದ್ವೇಷಕ್ಕೆ ಪ್ರೀತಿಯಿಂದ ಉತ್ತರ ನೀಡುವ ತೀರ್ಮಾನ ಎಲ್ಲರದಾಗಿತ್ತು. ಬಿಜೆಪಿಯು ದ್ವೇಷದ ರಾಜಕಾರಣ ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ  ಎಂದು ಎಲ್ಲರೂ ಬಯಸಿದರು.

ಏಳು ಬಣ್ಣಗಳ ಬಾವುಟ ಮತ್ತು ರಾಷ್ಟ್ರ ಧ್ವಜ ಎತ್ತಿ ಹಿಡಿದು ಉದ್ಘಾಟನೆ

ಕೋಣೆಗಳ ಮುನ್ನಡಿ

ಜನಸಾಗರ

ಗಾಂಧೀಜಿಗೆ ಆದ್ಯತೆ ನೀಡಿ ನಾರಾಯಣ ಗುರು, ಹಾಜಿ ಅಬ್ದುಲ್ಲಾ ಮೊದಲಾದವರ ಸ್ತಬ್ಧ ಚಿತ್ರಗಳು

ಉಡುಪಿ ಬಸ್ಸು ನಿಲ್ದಾಣಗಳಿಗೆ ಸುತ್ತು ಹಾಕಿದ ಮೆರವಣಿಗೆ

ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಸಮಾವೇಶ ಸಮಾರೋಪ ಕಂಡಿತು.

ಎಲ್ಲ ಧರ್ಮದ ಸ್ವಾಮೀಜಿಗಳು ಇದರಲ್ಲಿ ಪಾಲ್ಗೊಂಡು ಸಮಾಜ ಸಾಮರಸ್ಯ ಹಾರೈಸಿದರು.