ದಿನಾಂಕ 28-12-23 ರಂದು ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮಂಗಳೂರಿನಲ್ಲಿ ಸ್ನಾತಕೋತ್ತರ ವಿಭಾಗ ವತಿಯಿಂದ ಮೂಲವ್ಯಾಧಿ ದಿನಾಚರಣೆ ಪ್ರಯುಕ್ತ ಮಂಗಳೂರಿನ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ಕ್ಷಾರ ತಜ್ಞ  ಡಾ ಸುರೇಶ ನೆಗಳಗುಳಿ ಇವರಿಂದ  ಉಪನ್ಯಾಸ ನಡೆಯಿತು.

ಮಹಾಸ್ರೋತಸ್ಸಿನ ಕೊನೆಯ ಬಾಗಿಲು ಹಾಳಾದರೆ ದೇಹಕ್ಕೇ ಅಪಾಯ.ಹಾಗಾಗಿಯೇ ಮೂಲವ್ಯಾಧಿಯನ್ನು ಮೂಲದಿಂದಲೇ ತೆಗೆಯ ಬೇಕು ಎನ್ನುತ್ತಾ ವಿಷಯ ಸಂಬಂಧಿ ಮುಕ್ತಕ ಮಾಲೆಯನ್ನು ವಾಚಿಸಿ ಎರಡು ಗಂಟೆಗಳ ಕಾಲ ಗುದ ಸಂಬಂಧೀ ರೋಗಗಳ  ಸಂಪೂರ್ಣ ಸಚಿತ್ರ ಮಾಹಿತಿ ನೀಡಲಾಯಿತು.

ಪ್ರಾಚಾರ್ಯ ಡಾ .ರವಿ ರಾವ್ ಅವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸಿ ಉದ್ಘಾಟನೆ ಗೊಂಡ ಕಾರ್ಯಕ್ರಮವು ಕಾಲೇಜು ಪ್ರಾಧ್ಯಾಪಕಿ  ಡಾ ‌ಎಲಿಜಬೆತ್ ಅವರು ಸ್ವಾಗತಿಸಿದರು. ಡಾ ಮೀರಾ ವಂದಿಸಿದರು. ಡಾ ಜೆಸಿಂತಾ, ಡಾ ಗೌತಮ್ ,ಡಾ ದಿವ್ಯಾ ಮುಂತಾದವರು ಉಪಸ್ಥಿತರಿದ್ದರು.