ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಪುರಸಭೆಯ ಕುತಂತ್ರ ಬುದ್ಧಿ ಮತ್ತೆ ಕಂಡುಬರುತ್ತಿದೆ. ನಿನ್ನೆ ಪತ್ರಿಕಾ ವರದಿ ಕಂಡ ತಕ್ಷಣ ಸಂಬಂಧಪಟ್ಟ ಪುರಸಭಾ ಅಧಿಕಾರಿಗಳು ಕೊಳಚೆ ನೀರು ಬರದಂತೆ ತಡೆ ಒಡ್ಡಿದ್ದರು. ಆದರೆ ಇಂದು ಮಧ್ಯಾಹ್ನ ಯಾರೂ ಇರುವುದಿಲ್ಲ ಎಂಬ ಭಂಡ ಧೈರ್ಯದಿಂದ ಮತ್ತೆ ಕೊಳಚೆ ನೀರು ಬರುತ್ತಿರುವ ಬಗ್ಗೆ ಸ್ಥಳೀಯರು ದೂರುತ್ತಾರೆ. ಎಂದರೆ ಪುರಸಭೆಯವರು ಪೈಪ್ ತೆಗೆಯದೆ ಸ್ಥಳೀಯರೊಂದಿಗೆ ರಾಜಕೀಯ ಮಾಡುತ್ತಿದ್ದಾರೆ.
ಇದೀಗ ಸ್ಥಳೀಯರು ಒಟ್ಟಾಗಿ ಎಲ್ಲಾ ಬಹು ಮಹಡಿ ಕಟ್ಟಡದ ಎಲ್ಲಾ ತೂಬುಗಳನ್ನೂ ಸಿಮೆಂಟ್ ಹಾಕಿ ಬಂದ್ ಮಾಡುವ ಸಿದ್ಧತೆಯಲ್ಲಿದ್ದಾರೆ.