ಉಡುಪಿಯ ಹಿಜಬ್ ವಿವಾದದ ಆಲಿಯಾ ಅಸಾದಿ ಮತ್ತು ರೇಶಮ್ ಎಂಬ ವಿದ್ಯಾರ್ಥಿನಿಯರು ಪರೀಕ್ಷೆ ಪ್ರವೇಶ ಪತ್ರ ಪಡೆದರೂ ಹಿಜಬ್ ಧರಿಸಿ ಬರೆಯಲು ಅವಕಾಶ ನೀಡದ್ದರಿಂದ ಪರೀಕ್ಷೆ ಬರೆಯದೆ ಮನೆಗೆ ತೆರಳಿದರು.

ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜಿಗೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿನಿಯರು ಪರೀಕ್ಷಾ ಪ್ರವೇಶ ಪತ್ರ ಪಡೆದರು. ಅನಂತರ ಹಿಜಬ್ ಧರಿಸಿ ಉತ್ತರ ಪರೀಕ್ಷೆ ಬರೆಯಲು ‌ಅವಕಾಶ ಕೊಡಬೇಕು ಎಂದು ಪ್ರಾಂಶುಪಾಲರಲ್ಲಿ ಮನವಿ ಮಾಡಿಕೊಂಡರು. ಅವರು ನಿರಾಕರಿಸಿದರು. ಪರೀಕ್ಷೆ ಆರಂಭವಾಗುವುದಕ್ಕೆ ತುಸು ಮೊದಲು ಅವರು ಪರೀಕ್ಷೆ ಬಹಿಷ್ಕರಿಸಿ ಮನೆಗೆ ಹೋದರು. ಹೊರಗೆ ಪತ್ರಿಕೆಯವರಿಗೆ ಪ್ರತಿಕ್ರಿಯೆ ನೀಡಲು ಆ ಇಬ್ಬರು ವಿದ್ಯಾರ್ಥಿನಿಯರೂ ನಿರಾಕರಿಸಿದರು.