ಕಿರಿಯನೊಂದಿಗೆ ಡೇಟಿಂಗ್ ನಡೆಸಿದರೆ, ಲಿವಿಂಗ್‌ ರಿಲೇಶನ್‌ಶಿಪ್‌ನಲ್ಲಿ ಇದ್ದರೆ ಅಪರಾಧಿಗಳಂತೆ ನೋಡುತ್ತಾರೆ. ವಿಚ್ಛೇದಿತ ಮತ್ತು ಗಂಡನಿಂದ ದೂರವಾದ ಮಹಿಳೆಯರೂ ಬದುಕಬೇಕು ಎಂದು ನಟಿ ಮಲೈಕಾ ಹೇಳಿದ್ದಾರೆ.

ನಾನು ಗಟ್ಟಿ, ಪ್ರಗತಿಪರ ಹೆಣ್ಣು. ಆರೋಗ್ಯಕರ ಬದುಕು ನನ್ನ ಹೆಗ್ಗುರಿ. ನನ್ನ ತಾಯಿಯಿಂದ ಧೈರ್ಯದ ಬದುಕು ಬಳುವಳಿ ಪಡೆದಿದ್ದೇನೆ ಎಂದು ಮಲೈಕಾ ಹೇಳಿದರು.

48ರ ಮಲೈಕಾ ಮತ್ತು 36ರ ಅರ್ಜುನ್ ಕಪೂರ್ 2016ರಿಂದ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ.