ಕಳೆದ ನಾಲ್ಕು ವರುಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 133 ಮಕ್ಕಳು ಕಾಣೆಯಾಗಿ ಹೋಗಿದ್ದು, ಅವರಲ್ಲಿ 12 ಮಕ್ಕಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅವರಲ್ಲಿ 10 ಜನ ಕಮಿಶನರೇಟ್ ವ್ಯಾಪ್ತಿಯವರು ಎಂದು ತಿಳಿದು ಬಂದಿದೆ.

ಪತ್ತೆಯಾಗದವರಲ್ಲಿ 7 ಹೆಣ್ಣು, 5 ಗಂಡು ಮಕ್ಕಳು ಸೇರಿದ್ದಾರೆ. ಹಳ್ಳಿಗಳಿಗಿಂತ ನಗರಗಳಲ್ಲೇ ಹೆಚ್ಚು ಮಕ್ಕಳು ಕಾಣದಾಗುತ್ತಿದ್ದು, ಗಂಡ ಹೆಂಡಿರ ಜಗಳ ಮಕ್ಕಳ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ ಎನ್ನಲಾಗಿದೆ. 

2018ರಲ್ಲಿ 45ರಲ್ಲಿ 43, 19ರಲ್ಲಿ 50ರಲ್ಲಿ 44, 20ರಲ್ಲಿ 14ರಲ್ಲಿ 8 ಮತ್ತು 2021ರಲ್ಲಿ ನವೆಂಬರ್‌ವರೆಗೆ 24ಕ್ಕೆ 24 ಮಕ್ಕಳು ನಾಪತ್ತೆ ಹಾಗೂ ಪತ್ತೆಯಾಗಿವೆ.