ಉಜಿರೆ.ಮಾ.02: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ, ಲಾೈಲ, ಉಜಿರೆಯಲ್ಲಿ ಜಾಗೃತಿ ಸೌಧ ನವಜೀವನ ಸಮಿತಿಯನ್ನು ಉದ್ಘಾಟನೆಗೊಳಿಸಲಾಯಿತು. ಬೆಳ್ತಂಗಡಿ ಮತ್ತು ಗುರುವಾಯನ ಕೆರೆಯೋಜನಾ ವ್ಯಾಪ್ತಿಯ ನವಜೀವನ ಸದಸ್ಯರನ್ನು ಈ ಸಮಿತಿಗೆ ಪದಾಧಿಕಾರಿಗಳಾಗಿ ಆಯ್ಕೆ ಮಾಡಿ ಮಾಹಿತಿ ನೀಡಲಾಯಿತು.ಈ ಸಮಿತಿಯ ಅಧ್ಯಕ್ಷರಾಗಿ ಗಣೇಶ್ ಪ್ರಸಾದ್ ಲಾೈಲ, ಉಪಾಧ್ಯಕ್ಷರುಗಳಾಗಿ ರುಕ್ಮಯ ಪೂಜಾರಿ ಬಂದಾರು, ಸಿದ್ಧಪ್ಪ ಗೌಡಕೊಕ್ಕಡ, ಸಂಯೋಜಕರಾಗಿ ಬಾಬು ಆಚಾರ್ಯ ಪುದುವೆಟ್ಟು, ಕಾರ್ಯದರ್ಶಿಯಾಗಿ ರಮೇಶ್ ಅಂಡೆತಡ್ಕ ಇವರುಗಳು ಆಯ್ಕೆಯಾದರು. 60 ಮಂದಿ ತಾಲೂಕು ನವಜೀವನ ಸದಸ್ಯರು ಪಾಲ್ಗೊಂಡಿದ್ದು,
ಪ್ರತಿ ತಿಂಗಳ ಪ್ರಥಮ ಮಂಗಳವಾರದಂದು ಬೆಳಿಗ್ಗೆ 10.00 ಗಂಟೆಗೆ ಸಭೆಯನ್ನು ನಡೆಸುವುದೆಂದು ತೀರ್ಮಾನಿಸಲಾಯಿತು. ಆಗಮಿಸಿದ ಎಲ್ಲ ನವಜೀವನ ಸದಸ್ಯರಿಗೆ ಶಾಲು ಹಾಕಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿಗಳಾದ ಮೋಹನ್‍ಕೆ., ಜಯಕರ ಶೆಟ್ಟಿ, ವೇದಿಕೆಯ ಶಿಬಿರಾಧಿಕಾರಿಗಳು, ಆರೋಗ್ಯ ಸಹಾಯಕಿಯರು ಮತ್ತು ತಾಲೂಕು ನವಜೀವನ ಸ್ವಯಂ ಸೇವಕರು ಭಾಗವಹಿಸಿದ್ದರು. ಮುಂದಿನ ಸಭೆಯನ್ನು ನಡೆಸಲು ಕಾರ್ಯಸೂಚಿ ಹಾಗೂ ಅನಿಸಿಕೆ ಹೇಳಲು ನವಜೀವನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಮುಂದಿನ ಸಭೆಎಪ್ರಿಲ್ 5ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.