"ಯೂಥ್ ಆಫ್ ದೈವಜ್ಞ" ಚಾನಲ್ ಉದ್ಘಾಟನೆ ಹಾಗೂ ಲೋಗೋ ಅನಾವರಣ ಕಾರ್ಯಕ್ರಮವನ್ನು ಮಂಗಳೂರಿನ ಶ್ರೀ ಗಾಯತ್ರಿ ದೇವಿ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ತಾರೀಖು 14 ಜನವರಿ 2022 ರಂದು ನೆರವೇರಿತು. ಈ ಚಾನೆಲ್ ಮುಖೇನ ದೈವಜ್ಞ ಬ್ರಾಹ್ಮಣ ಸಮಾಜದ ಯುವಕ ಯುವತಿಯರ ಸಾಧನೆಯನ್ನು ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯಿಸಲು ಈ ಚಾನಲ್ ಸಹಕಾರಿಯಾಗಲಿದೆ. ಹಾಗೂ ಹಲವು ಬಗೆಯ ವಿನೂತನ ಕಾರ್ಯಕ್ರಮಗಳು ಈ ಚಾನಲ್ ಮುಖೇನ ಪ್ರಸಾರವಾಗಲಿದೆ ಎಂದು ಯೂಥ್ ಆಫ್ ದೈವಜ್ಞ ಚಾನಲ್ ನ ಮುಖ್ಯ ಸಂಚಾಲಕರಾದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿರುವ ಅರುಣ್ ಜಿ. ಶೇಟ್ ಅವರು ಈ ಕಾರ್ಯಕ್ರಮದಲ್ಲಿ ತಿಳಿಸಿದರು. ಹಾಗೂ ಈ ಚಾನಲ್ ನ ಪ್ರಪ್ರಥಮ ವೀಡಿಯೋ ಆಗಿರುವ "ಅಮೃತವನ" ವನ್ನು ಬಿಡುಗಡೆಗೊಳಿಸಲಾಯಿತು. ಈ ವೀಡಿಯೋ ದಲ್ಲಿ ಮಂಗಳೂರು ನಗರದ 22 ವರ್ಷದ ಯುವಕ ಮನೋಜ್ ಆರ್. ರೇವಣಕರ್ ಅವರು ದೇಶೀಯ ಗೋವಿನ ತಳಿಯ ಗೋಶಾಲೆಯ ಸ್ಟಾರ್ಟಪ್ ಅನ್ನು ಪ್ರಾರಂಭಿಸಿ ಸ್ವ ಉದ್ಯೋಗವಾಗಿ ಕೈಗೆತ್ತಿಕೊಂಡದ್ದಕ್ಕೆ ಬಹಳ ಶ್ಲಾಘನೆ ವ್ಯಕ್ತವಾಯಿತು.

ಈ ಕಾರ್ಯಕ್ರಮದಲ್ಲಿ ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಸುಧಾಕರ ಶೇಟ್, ದೈವಜ್ಞ ಯುವಕ ಮಂಡಳಿ ಅಧ್ಯಕ್ಷರಾದ ಗಣೇಶ್ ಶೇಟ್ ಎಕ್ಕೂರು, ದೈವಜ್ಞ ಮಹಿಳಾ ಮಂಡಳಿಯ ಅಧ್ಯಕ್ಷೆ ಪುಷ್ಪ ಕೆ. ಶೇಟ್, ದೈವಜ್ಞ ಬ್ರಾಹ್ಮಣ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಗೌರವ ಅಧ್ಯಕ್ಷ ಅರುಣ್ ಶೇಟ್, ಹಾಗೂ ಅಧ್ಯಕ್ಷ ಶ್ರೀಪಾದ ಬಿ. ರಾಯ್ಕರ್, ದೈವಜ್ಞ ಸೌರಭ ಪತ್ರಿಕೆಯ ಪ್ರಕಾಶಕರಾದ ರಾಜೇಂದ್ರಕಾಂತ ಶೇಟ್, ಮಂಜುನಾಥ ಶೇಟ್, ಕಾರ್ತಿಕ್ ಶೇಟ್, CA ಕಿರಣ್ ಜಿ. ಶೇಟ್ ಉಪಸ್ಥಿತರಿದ್ದರು.