ರೂಪಾಂತರಿ ವೈರಸ್‌ಗಳ ವ್ಯಾಖ್ಯಾನ ಬರುತ್ತಿದ್ದರೂ ಕೋವಿಡ್ ಕಾಟ ನಿಂತಿಲ್ಲ. ಶನಿವಾರ ದಿನದ 24 ಗಂಟೆಗಳಲ್ಲಿ ಜಗತ್ತಿನಲ್ಲಿ 14 ಲಕ್ಷದಷ್ಟು ಮಂದಿ ಕೊರೋನಾ ಸೋಂಕಿಗೀಡಾದರೆ, 6 ಸಾವಿರದಷ್ಟು ಜನರು ಸಾವಿಗೀಡಾದರು. ಹೀಗಾಗಿ ಒಟ್ಟು ಸೋಂಕಿತರ ಸಂಖ್ಯೆಯು 44,54,28,119 ಮುಟ್ಟಿದೆ. ಹಾಗೆಯೇ ಸಾವು ಮೊತ್ತವು 60,15,503 ಆಗಿದೆ.
ಭಾರತದಲ್ಲಿ ಕೊರೋನಾ ಅಬ್ಬರ ತಗ್ಗುತ್ತಿರುವ ಲಕ್ಷಣ ಗೋಚರಿಸುತ್ತಿದೆ. ನಿನ್ನೆ ದಿನ ನಮ್ಮ ಜನ 5,530 ಮಂದಿ ಹೊಸದಾಗಿ ಕೊರೋನಾ ಸೋಂಕಿಗೊಳಗಾದರು. ಅಲ್ಲಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆಯು 4,29,62,658 ದಾಟಿತು. ನಿನ್ನೆ ಶನಿವಾರ ದಿನ 155 ನಮ್ಮ ಜನ ಕೊರೋನಾ ಪೀಡೆಗೆ ಬಲಿಯಾದರು. ಇದರೊಂದಿಗೆ ದೇಶದಲ್ಲಿ ಕೊರೋನಾ ಸಾವು ಕಂಡವರ ಒಟ್ಟು ಸಂಖ್ಯೆಯು 5,15,063 ಮುಟ್ಟಿತು.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 3 ಜನ ಕೋವಿಡ್ ಸಾವು ಕಂಡಿದ್ದಾರೆ. ಇದರಿಂದಾಗಿ ಒಟ್ಟು ಸಾವಿಗೀಡಾದವರ ಸಂಖ್ಯೆಯು 39,988 ತಲುಪಿತು. ನಿನ್ನೆ ಶನಿವಾರ ರಾಜ್ಯದಲ್ಲಿ ಸೋಂಕಿಗೀಡಾದವರ ಸಂಖ್ಯೆಯು 278. ಇದೂ ಸೇರಿ ಒಟ್ಟು ಸೋಂಕಿತರ ಸಂಖ್ಯೆಯು ಈಗ 39,42,346 ದಾಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ದಿನದ 24 ಗಂಟೆಗಳಲ್ಲಿ ಕೋವಿಡ್ ಸಾವು ಸಂಭವಿಸಿಲ್ಲ. ಸಾವು ಸಂಖ್ಯೆ 1,847ರಲ್ಲಿದೆ. ನಿನ್ನೆ ಜಿಲ್ಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆ 5. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆಯು 1,35,422 ಆಯಿತು.
ಉಡುಪಿ ಜಿಲ್ಲೆಯಲ್ಲಿ ನಿನ್ನೆ ದಿನ ಕೊರೋನಾ ಸಾವು ಸಂಭವಿಸಿಲ್ಲ. ಒಟ್ಟು ಸಾವಿನ ಸಂಖ್ಯೆಯು 546ರಲ್ಲಿದೆ. ಶನಿವಾರದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸೋಂಕಿಗೆ ಈಡಾದವರ ಸಂಖ್ಯೆಯು 4. ಇದೂ ಸೇರಿ ಸೋಂಕಿತರ ಸಂಖ್ಯೆಯು ಈಗ 95,631 ಆಗಿದೆ.