ಜಾಗತಿಕವಾಗಿ ರೂಪಾಂತರಿ ಕೋವಿಡ್‌ ವಯ್ರಸ್ ಕಾಟ ಮುಂದುವರಿದಿದೆ. ಬುಧವಾರ ದಿನ ಜಗತ್ತಿನಲ್ಲಿ 6.1 ಲಕ್ಷದಷ್ಟು ಜನ ಸೋಂಕಿಗೀಡಾದರೆ, 2.1 ಸಾವಿರದಷ್ಟು ಜನರು ಕೊರೋನಾ ಮರಣ ಕಂಡರು. ಜಾಗತಿಕವಾಗಿ ಒಟ್ಟು ಸೋಂಕಿತರ ಸಂಖ್ಯೆಯು ಈಗ 52,46,99,321 ದಾಟಿದೆ. ಹಾಗೆಯೇ ಕೊರೋನಾ ಬಲಿ ಪಡೆದವರ ಸಂಖ್ಯೆಯು 62,94,628 ಮುಟ್ಟಿದೆ.

ಭಾರತದಲ್ಲಿ ಕೋವಿಡ್‌ ಅಲ್ಪ ವಿರಾಮದಲ್ಲೇ ಮುಂದುವರಿದಿದೆ. ಬುಧವಾರ ದೇಶದಲ್ಲಿ ಹೊಸದಾಗಿ 1,829 ನಮ್ಮ ಜನ ಸೋಂಕಿತರು ಎನಿಸಿದರು. ಒಟ್ಟು ಸೋಂಕಿತರ ಸಂಖ್ಯೆಯು ಈಗ 4,31,28,786 ದಾಟಿತು. ನಿನ್ನೆ ದಿನ 33 ನಮ್ಮ ಜನ ಕೊರೋನಾ ಮರಣ ವಶವಾದರು. ಒಟ್ಟು ಮರಣ ಸಂಖ್ಯೆಯು ಈಗ 5,24,293 ಮುಟ್ಟಿತು.

ರಾಜ್ಯದ ರಾಜಧಾನಿ ಬೆಂಗಳೂರು ಕೊರೋನಾಕ್ಕೂ ರಾಜಧಾನಿ ಆಗಿದೆ. ಬುಧವಾರ ಕರ್ನಾಟಕದಲ್ಲಿ ಹೊಸದಾಗಿ 122 ಮಂದಿ ಸೋಂಕು ಭಾಜನರಾಗಿದ್ದಾರೆ.  ಒಟ್ಟು ಸೋಂಕಿತರ ಸಂಖ್ಯೆಯು 39,50,004 ತಲುಪಿದೆ. ನಿನ್ನೆ ದಿನ ರಾಜ್ಯದಲ್ಲಿ ಒಂದು ಕೊರೋನಾ ಸಾವು ಸಂಭವಿಸಿದೆ. ಒಟ್ಟು ಮರಣ ಅಂಕೆ 40,064ಕ್ಕೆ ಏರಿದೆ.

ಬುಧವಾರ ದಕ್ಷಿಣ ಕನ್ನಡದಲ್ಲಿ 6 ಸೋಂಕು ವರದಿಯಾಗಿದೆ. ಒಟ್ಟು ಸೋಂಕು ಸಂಖ್ಯೆ 1,35,560ಕ್ಕೆ ಏರಿದೆ. ನಿನ್ನೆ ಜಿಲ್ಲೆಯಲ್ಲಿ ಸಾವು ವಿರಾಮ ಪಡೆದಿದೆ. ಒಟ್ಟು ಕೊರೋನಾ ಸಾವು ಕಂಡವರ ಸಂಖ್ಯೆ 1,850ರಲ್ಲಿದೆ.

ಬುಧವಾರ ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ಒಂದು ವರದಿಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆಯು 95,617ಕ್ಕೆ ಏರಿದೆ. ನಿನ್ನೆ ಜಿಲ್ಲೆಯಲ್ಲಿ ಕೋವಿಡ್‌ ಸಾವು ಆಗಿಲ್ಲ. ಒಟ್ಟು ಮೃತರಾದವರ ಸಂಖ್ಯೆಯು 546ರಲ್ಲಿ ಇದೆ.