ಬ್ಯಾಂಕಾಕ್‌ನಲ್ಲಿ ನಡೆದ ಥಾಮಸ್ ಕಪ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಶಿಯಾವನ್ನು ಸೋಲಿಸಿ ಭಾರತವು ಮೊದಲ ಬಾರಿಗೆ ಚಾಂಪಿಯನ್ ಆಯಿತು.

ಭಾರತ ಥಾಮಸ್ ಕಪ್ ಫೈನಲ್ ತಲುಪಿದ್ದು ಇದೇ ಮೊದಲು. 1952, 1955, 1979ರಲ್ಲಿ ಕಂಚಿನ ಪದಕ ಗೆದ್ದಿದ್ದದ್ದು ಭಾರತದ ಇಲ್ಲಿಯವರೆಗಿನ ದೊಡ್ಡ ಸಾಧನೆ ಆಗಿತ್ತು. ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೆನ್, ಕಿಡಂಬಿ ಶ್ರೀಕಾಂತ್ ಮತ್ತು ಡಬಲ್ಸ್‌ನಲ್ಲಿ  ಸಾತ್ವಿಕ್ ಮತ್ತು ಚಿರಾಗ್ ಗೆದ್ದು ಭಾರತದ 3-0 ಚಾರಿತ್ರಿಕ ಗೆಲುವಿಗೆ ಕಾರಣರಾದರು.