ಮೂಡು ಬಿದಿರೆ, ಜೂನ್ 21: ಇಂದು ಸ್ವಸ್ತಿಶ್ರೀ ಕಾಲೇಜು ಮೂಡು ಬಿದಿರೆ ಹಾಗೂ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ ) ಜಂಟಿ ಆಯೋಜನೆ ಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ವಾದ ಇಂದು ಜೂನ್ 21 ರಂದು ಬೆಳಿಗ್ಗೆ 9.30ಕ್ಕೆ ಮೂಡು ಬಿದಿರೆ ಶ್ರೀ ಮಠ ದ ಭಟ್ಟಾರಕ ಭವನ ದಲ್ಲಿ ಜಗತ್ತಿ ನದ್ಯಾo ತ ಯೋಗ ದಿನ ಆಚರಣೆ ಮಾಡುವ ಸಂಧರ್ಭ ದಲ್ಲಿ ನಾವೆಲ್ಲರೂ ಯೋಗ ದ ಮಹತ್ತ್ವ ತಿಳಿದು ಕೊಂಡು ನಿತ್ಯ ಅನುಷ್ಠಾನ ಮಾಡಲು ಪ್ರಯತ್ನಿಸೋಣ ಯೋಗ ‘ ಎನ್ನುವ ಪದ ಸಂಸ್ಕೃತ ಮೂಲಧಾತುವಾದ ‘ ಯುಜ್ ‘ ಎನ್ನುವುದರಿಂದ ಬಂದಿದ್ದು , ಬಂಧಿಸು , ಕೂಡಿಸು , ನೂಗು ಕಟ್ಟು , ಚಿತ್ತವನ್ನು ನಿರ್ದೆಶಿಸಿ ಕೇಂದ್ರೀಕರಿಸು ಉಪಯೋಗಿಸು ಮತ್ತು ಆಸಕ್ತಿವಹಿಸು ಎನ್ನುವ ಅರ್ಥಗಳನ್ನು ಕೊಡುತ್ತದ ಸಂಯೋಜನ ಅಥವಾ ಸಂಸರ್ಗ ಎನ್ನುವ ಅರ್ಥವೂ ಇದಕ್ಕೆ ಇದೆ . ಭಗವಂತನ ಇಚ್ಛೆಯೊಂದಿಗೆ ನಮ್ಮ ಇಚ್ಛೆಯ ನಿಜವಾದ ಸಂಸರ್ಗವೆಂದರೆ ಇದೇ.
ಯೋಗದಲ್ಲಿ ಎಂಟು ಹಂತಗಳಿವೆ. ಪತಂಜಲಿ ಇದನ್ನು ಅಷ್ಟಾಂಗ ಯೋಗ ಎಂದು ಕರೆದರು. ಯಮ, ನಿಯಮ, ಆಸನ, ಪ್ರಾಣಯಾಮ, ಪ್ರತ್ಯಾಹಾ ರ, ಧಾರಣ, ಧ್ಯಾನ, ಸಮಾಧಿ. ಸಂಸಾರ ದ ಈ ಅನಂತ ಪ್ರಯಾಣದಲ್ಲಿ ನಮ್ಮನ್ನು ಕರೆದೊಯ್ಯುವ ವಾಹನವೇ ಧ್ಯಾನ.ಧ್ಯಾನದ ಉದ್ದೇಶವು ನಮ್ಮನ್ನು ಪರಿವರ್ತಿಸುವುದು.ಇದು ಸ್ವಾಭಾವಿಕತೆಯನ್ನು ಸೃಷ್ಟಿಸುತ್ತದೆ” .ಸಂಕೋಚನದಿಂದ ವಿಸ್ತರಣೆಗೆ; ಚಡಪಡಿಕೆಯಿಂದ ಶಾಂತಿಗೆ- ದಿನನಿತ್ಯ ಯೋಗ ಮಾಡುವುದರ ಪರಿಣಾಮ ದೇಹ ಮನಸ್ಸು ವಿನ ಅರೋಗ್ಯ ಚೆನ್ನಾಗಿ ರುದು ಯೋಗವು ಒಂದು ಶ್ರೇಷ್ಠ ದೇಹ ಅರೋಗ್ಯ ಕಾಪಾಡುವ ಕಲೆ ಯಾಗಿದೆ ಮತ್ತು ಅದು ಜೀವನದ ಅನಿವಾರ್ಯ ಭಾಗ ಇದರಿಂದ ಅನೇಕ ಲಾಭ ವಿದ್ದು ಓದುವ ವಿದ್ಯಾರ್ಥಿ ಗಳ ಔದಾಸಿನ್ಯ ಅತೀ ನಿದ್ರೆ ಹೋಗಲಾಡಿಸಿ ಉತ್ಸಾಹ ನೀಡುದು.
ಆದಿ ಯೋಗಿ ಅಧಿನಾಥ ತೀರ್ಥ o ಕರರು ಇದನ್ನು ಸಾಧಿಸಿ ಪ್ರಥಮ ತೀರ್ಥ o ಕರ ರೆಂದು ಪ್ರಸಿದ್ದ ರಾಗಿ ಕೈಲಾಸ ಗಿರಿ ಯಲ್ಲಿ ಮುಕ್ತ ರಾದರು ಎಂಬ ಕಥೆ ಆದಿಪುರಾಣ ದಲ್ಲಿ ಉಲ್ಲೇಖ ಗೊಂಡಿದೆ ಎಲ್ಲಾ ತೀರ್ಥoಕರರು ಪದ್ಮಾಸನ ಖಡ್ಗ ಆಸನ ಮೂಲಕ ತಪ ಆಚರಿಸುವ ಕಥೆ ತ್ರಿ ಷಷ್ಟಿ ಶಲಾ ಕ ಪುರುಷ ಕಥೆ ಯಲ್ಲಿ ಉಲ್ಲೇಖ ಗೊಂಡಿದೆ.
ಮುನಿ ಮಾಘ ನಂದಿ, ಪತಂಜಲಿ ಮೊದಲಾದ ಋಷಿ ಮುನಿ ಗಳು ಭಾರತ ದಲ್ಲಿ ವಿವಿಧ ಆಸನ ಗಳ ಮೂಲಕ ಯೋಗ ಧ್ಯಾನ ಆಚರಿಸಿ ಶ್ರೇಷ್ಠ ಸ್ಥಾನ ತಲುಪಿ ನಮಗೆಲ್ಲ ಆದರ್ಶ ರಾಗಿದ್ದರೆ. ಯೋಗ ಸರ್ವರಿಗೂ ಉಪಯೋಗ ವಾಗುವ ವಿಧ್ಯೆ ಮನುಕುಲದ ವಿಶ್ವ ಅರೋಗ್ಯ ಶಾಂತಿ ಗೆ ಯೋಗ ಧ್ಯಾನ ದ ಕೊಡುಗೆ ಅತ್ಯಮೂಲ್ಯ ವಾಗಿದೆ ಹಾಗಾಗಿ ಸರ್ವ ರೊ ನಿತ್ಯ ಜೀವನ ದಲ್ಲಿ ಆಚರಿಸಿ ದೇಹ ಅರೋಗ್ಯ,ಆನಂದ ಮನ ಶಾಂತಿ ಪಡೆಯೋಣ ಸರ್ವರಿಗೂ ವಿಶ್ವ ಯೋಗ ದಿನದ ಶುಭಾಷಯಗಳು ಎಂದು ಇಂದು ವಿದ್ಯಾರ್ಥಿ ಗಳಿಗೆ ಸ್ವಾಮೀಜಿ ತಮ್ಮ ಆಶೀರ್ವಾದ ಶ್ರೀ ಮಠ ದ ಸ್ವಸ್ತಿಶ್ರೀ ಭಟ್ಟಾರಕ ಭವನ ದಲ್ಲಿ ಸರ್ವಾoಗ ಆಸನ, ಶಿರ್ಷಾಸನ, ಪವನ ಮುಕ್ತಾಸನ, ಪರ್ವತಾಸನ, ವೃಕ್ಷ ಆಸನ,ಮೊದಲಾದ ವಿವಿಧ ಆಸನ ಹಾಗೂ ಪ್ರಾಣ ಯಾಮ ಗಳನ್ನು ವಿದ್ಯಾರ್ಥಿ ಗಳಿಗೆ ತಿಳಿಸಿದರು ಕಾಲೇಜು ಉಪನ್ಯಾಸಕಿ ಸುಜಾತಾ ವಿದ್ಯಾರ್ಥಿ ವಿದ್ಯಾರ್ಥಿನಿ ಯರು ವ್ಯೆವಸ್ಥಾಪಕ ಸಂಜಯಂಥ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.