ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮೋರ್ಚಾ ವತಿಯಿಂದ ಲೇಡಿಗೋಷನ್ ಆಸ್ಪತ್ರೆಯ ಸಿಬ್ಬಂದಿಗಳಿಗೆ ಏರ್ಪಡಿಸಿರುವ "ಯೋಗ ತರಬೇತಿ ಶಿಬಿರವನ್ನು" ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ರವರು ಉದ್ಘಾಟಿಸಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮೀ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಡಾ.ಬಾಲಕೃಷ್ಣ, ಯೋಗಗುರು ಏಕನಾಥ್ ಬಾಳಿಗ, ಪಕ್ಷದ ಪ್ರಮುಖರಾದ ಪ್ರಭಾಮಾಲಿನಿ, ಪೂಜಾ ಪೈ, ಆಶಾ ಡಿ'ಸಿಲ್ವ, ಸೇವಂತಿ ಶ್ರೀಯಾನ್, ಪೂರ್ಣಿಮಾ ರಾವ್ ಉಪಸ್ಥಿತರಿದ್ದರು
