ಉಡುಪಿ: ಚೈಲ್ಡ್ ಲೈನ್-1098 ಉಡುಪಿ, ಶ್ರೀ ಕೃಷ್ಣ ಬಾಲನಿಕೇತನ ಹಾಗೂ ಕುಕ್ಕಿಕಟ್ಟೆ ಖಾಸಗಿ ಅನುದಾನಿತ ಶಾಲೆ ಜಂಟಿಯಾಗಿ ಶ್ರೀಕೃಷ್ಣ ಬಾಲನಿಕೇತನ ಕುಕ್ಕಿಕಟ್ಟೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರನ್ನು ಚೈಲ್ಡ್ ಲೈನ್-1098 ಉಡುಪಿಯ ನಿರ್ದೇಶಕರಾದ ರಾಮಚಂದ್ರ ಉಪಾಧ್ಯಾಯರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ನಂತರ ಉಪಸ್ಥಿತರಿದ್ದ ಅತಿಥಿಗಳು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನಂತರ ಚಿತ್ಪಾಡಿ ಪತಂಜಲಿ ಸಂಸ್ಥೆಯ ಸದಾನಂದ ರಾವ್, ಶಿವಪ್ರಸಾದ ರಾವ್ ಹಾಗೂ ರವೀಂದ್ರನಾಥ್ ನಾಯಕ್ರವರು ಮಕ್ಕಳಿಗೆ ಯೋಗದ ಮಹತ್ವವನ್ನು ಪ್ರಾತ್ಯಕ್ಷಿತೆಯ ಮೂಲಕ ತಿಳಿಸಿದರು ಮತ್ತು ಮಕ್ಕಳಿಂದ ಯೋಗ ಮತ್ತು ಪ್ರಾಣಾಯಾಮವನ್ನು ಮಾಡಿಸಿದರು. ಈ ಕಾರ್ಯಕ್ರಮದಲ್ಲಿ ಚೈಲ್ಡ್ ಲೈನ್-1098 ಉಡುಪಿಯ ಸಿಬ್ಬಂದಿಗಳು, ಕುಕ್ಕಿಕಟ್ಟೆ ಅನುದಾನಿತ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ವಿದ್ಯಾರತ್ನ ಮತ್ತು ಸಹ ಶಿಕ್ಷಕರು ಹಾಗೂ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.