ಮಂಗಳೂರಿನ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಅತ್ಯುತ್ತಮ ಪ್ರಕಟಿತ ಕಥಾ ಸಂಕಲನಕ್ಕೆ ನೀಡುವ 2021 ನೇ ಸಾಲಿನ ಕಥಾಯಜ್ಞ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರಕ್ಕೆ ಪ್ರಕಟಿತ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ.ಪುರಸ್ಕಾರವು ರೂ. 25000 (ಇಪ್ಪತ್ತೈದು ಸಾವಿರ) ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು ಪುರಸ್ಕಾರ ಪತ್ರವನ್ನು ಒಳಗೊಂಡಿದೆ. ಕಥೆಗಾರರು 2021 ನೇ ಸಾಲಿನಲ್ಲಿ ಪ್ರಕಟಿಸಿದ ತಮ್ಮ ಕಥಾ ಸಂಕಲನಗಳನ್ನು ಏಪ್ರಿಲ್ 5 ತಾರೀಕಿನ ಒಳಗಾಗಿ 'ಅಧ್ಯಕ್ಷರು, ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ(ರಿ.), 107,ಶಿವಪ್ರಸಾದ್ ಗೋಲ್ಡ್, ಲ್ಯಾಂಡ್ ಲಿಂಕ್ಸ್ ಟೌನ್ಶಿಪ್ ಮುಖ್ಯರಸ್ತೆ, ಕೊಂಚಾಡಿ,ಮಂಗಳೂರು 575001 ವಿಳಾಸಕ್ಕೆ ಮೂರು 4 ಪ್ರತಿಗಳನ್ನು ಕಳಿಸಿಕೊಡಬಹುದು. ಕೃತಿಯ ಹಕ್ಕು ಸ್ವಾಮ್ಯ ಲೇಖಕರದ್ದಾಗಿದ್ದರೆ ಮಾತ್ರ ಪರಿಗಣಿಸಲಾಗುತ್ತದೆ. ಕಥಾ ಸಂಕಲನದ ಹಕ್ಕುಗಳು ಪ್ರಕಾಶಕರದ್ದಾಗಿದ್ದರೆ ಪರಿಗಣಿಸಲಾಗುವುದಿಲ್ಲ.ಪುರಸ್ಕಾರದ ಮೊತ್ತ ಪೂರ್ಣ ಪ್ರಮಾಣದಲ್ಲಿ ಕಥಾ ಸಂಕಲನದ ಲೇಖಕರಿಗಷ್ಟೇ ಮೀಸಲಾಗಿರುತ್ತದೆ. ಅನುವಾದಿತ, ಭಾಷಾಂತರದ ಮತ್ತು ಬಹು ಲೇಖಕರ ಕಥೆಗಳಿರುವ ಸಂಕಲನಗಳು ಭಾಗವಹಿಸಲು ಅರ್ಹವಾಗಿರುವುದಿಲ್ಲ. ಪ್ರತಿಷ್ಠಾನವು ಗೊತ್ತು ಮಾಡುವ ಮೂವರು ತೀರ್ಪುಗಾರರ ಸಮಿತಿ ಅತ್ಯುತ್ತಮ ಕಥಾಸಂಕಲನವನ್ನು ಪುರಸ್ಕಾರಕ್ಕೆ ಆಯ್ಕೆ ಮಾಡುತ್ತದೆ. ಪ್ರಶಸ್ತಿಗೆ ಕಳಿಸಿ ಕೊಡುವ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಪ್ರಶಸ್ತಿ ವಿಜೇತರ ಹೆಸರನ್ನು ಜೂನ್ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ವಿವರಗಳಿಗೆ 8310388415 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಟ್ರಸ್ಟ್ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.