ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಯಕ್ಷಗಾನ ಕಲಾವಿದರ (ವೃತ್ತಿಪರ/ಹವ್ಯಾಸಿ/ಮಹಿಳಾ) ಮಕ್ಕ ಳಿಂದ 2022 ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿ ಸಲಾಗಿದೆ.
ಈ ಬಾರಿ ಒಂದನೇ ತರಗತಿ ಯಿಂದ ಮೊದಲುಗೊಂಡು 60% ಗಿಂತ ಮೇಲ್ಪಟ್ಟು ಅಂಕಗಳನ್ನು ಗಳಿಸಿದ ಎಲ್ಲಾ ಯಕ್ಷಗಾನ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು.
ಅರ್ಜಿ ನಮೂನೆಯನ್ನು ಅಂಕ ಪಟ್ಟಿಯ ಪ್ರತಿಯೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಮಂಗಳೂರಿನ ಎಂ.ಜಿ.ರೋಡಿನ ಅಂಪಾಯರ್ ಮಾಲ್‌ನ 2ನೇ ಆಂತಸ್ತಿನಲ್ಲಿರುವ ಟ್ರಸ್ಟಿನ ಕೋಶಾಧಿಕಾರಿಯಾಗಿರುವ ಸಿ.ಎ. ಸುದೇಶ್ ಕುಮಾರ್ ರೈಯವರ ಕಛೇರಿಗೆ ಮುಖತಃ ಅಥವಾ ಅಂಚೆ ಮೂಲಕ ತಲುಪಿಸಲು ಕೋರಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-5-2022. ಹೆಚ್ಚಿನ ವಿವರಗಳಿಗಾಗಿ ಡಾ. ಮನು ರಾವ್ ಉಪಾಧ್ಯಕ್ಷರು ( 9844087664) ಇವರನ್ನು ಸಂಪರ್ಕಿಸಬಹುದು.
ನಿಯಮಾವಳಿಗಳು: ಅರ್ಜಿ ಸಲ್ಲಿಸಲು ಕನಿಷ್ಠ 60% ಅಂಕಗಳಿರ ಬೇಕು. ವಿದ್ಯಾರ್ಥಿಯ ಅಂಕಪಟ್ಟಿಯ ಪ್ರತಿ ಹಾಗೂ ಬ್ಯಾಂಕ್ ಉಳಿತಾಯ ಖಾತೆಯ ವಿವರಗಳಿರುವ ಪಾಸ್‌ಬುಕ್ ಪ್ರಥಮ ಪುಟದ ಪ್ರತಿಗಳನ್ನು ಲಗತ್ತಿಸಬೇಕು. 2021-2022 ಶೈಕ್ಷಣಿಕ ವರ್ಷದ ಪರೀಕ್ಷೆಯ ನಂತರ ಪ್ರಕಟ ಗೊಂಡ ಫಲಿತಾಂಶವನ್ನು ನಮೂದಿ ಸಬೇಕಾಗಿದೆ.. ವಿದ್ಯಾರ್ಥಿವೇತನವನ್ನು ಮೇ 25 ಭಾನುವಾರ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯುವ ಪಟ್ಲ ಸಂಭ್ರಮ 2022 ಕಾರ್ಯಕ್ರಮದಲ್ಲಿ ಖುದ್ದಾಗಿ ಬಂದು ಪಡೆಯಬೇಕು. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮದ್ದಾಗಿರುತ್ತದೆ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪ್ರಕಟನೆ ತಿಳಿಸಿದೆ.