ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾಸ್ವಾಮೀಜಿಗಳವರಿಂದ ಬಿಹಾರ್, ಜಾರ್ಖಂಡ್ ರಾಜ್ಯದ ತೀರ್ಥಕ್ಷೇತ್ರಗಳ ದರ್ಶನ 27.11.25ರಿಂದ ಐದು ದಿನಗಳ ತೀರ್ಥಯಾತ್ರೆಗಾಗಿ ಮಧ್ಯಾಹ್ನ ರಾಂಚಿ ಕ್ಷೇತ್ರದಿಂದ ಜೈನರ ಪವಿತ್ರ ಶಾಶ್ವತ ಸಿದ್ದಕ್ಷೇತ್ರ ಸಮ್ಮೇದ ಶಿಖರ್ಜಿಗೆ ಬಂದು 28.11.25ರ ಬೆಳಿಗ್ಗೆ 27 ಕಿ.ಮೀ ಒಟ್ಟು ಪರ್ವತ ಪರಿಕ್ರಮ ಇರುವ 20 ಕೂಟಗಳ ಮುಕ್ತಿ ಪಡೆದ ತೀರ್ಥಂಕರರ ಚರಣ ದರ್ಶನ ಮಾಡಿದರು.

ಅಪರಾಹ್ನ ಬೀಸ್ ಪಂಥಿ ಕೋಟಿಯ ಸಿದ್ದಚಕ್ರ ವಿಧಾನದಲ್ಲಿ ಪಾಲ್ಗೊಂಡರು. ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆಚಾರ್ಯ ಗಿರಿ ನಾರಸಾಗರ್, ಸಂಘದ ಮುನಿಗಳು ಉಪಸ್ಥಿತರಿದ್ದರು. ಮೂಡುಬಿದಿರೆ ಸ್ವಾಮೀಜಿಯವರನ್ನು ಅಧ್ಯಕ್ಷ ಅಜಯ್ ಬಾಬು, ಅರಾ ಪಾದಪೂಜೆ ಮಾಡಿ ಗೌರವಿಸಿದರು.

ಗುಣಯತನ್ ತೀರ್ಥದಲ್ಲಿ 108 ಮುನಿ ಸಮತಾ ಸಾಗರ್, ಆಚಾರ್ಯ 108 ಶಂಭವ ಸಾಗರ್ ಮೂಲತಃ ಉಡುಪಿ ಜಿಲ್ಲೆಯ ಬಸರೂರ್‌ನವರು ಹಾಗೂ ಶಿಖರ್ಜಿಯ ಅದಿನಾಥ ಸ್ವಾಮಿ ಪಂಚ ಕಲ್ಯಾಣದ ಎರಡನೇ ದಿನ ಸಮಾರಂಭದಲ್ಲಿ ಆಚಾರ್ಯ ತನ್ಮಯ ಸಾಗರ್ ಮುನಿ ಮಹಾರಾಜ್ ಅವರನ್ನು ಗೌರವಿಸಿ ಹರಸಿ ಆಶೀರ್ವಾದ ಮಾಡಿದರು.

ಈ ಸಂದರ್ಭದಲ್ಲಿ ದೀಕ್ಷಾ ಕಲ್ಯಾಣದ ಬಗ್ಗೆ ಮಾತನಾಡಿದ ಮೂಡುಬಿದಿರೆ ಸ್ವಾಮೀಜಿ: “ಸಂಸಾರ ಜೀವನದಲ್ಲಿ ಗೃಹಸ್ಥ ಜೀವನ ಮತ್ತು ಸನ್ಯಾಸ ಜೀವನ ಎಂಬ ಎರಡು ವಿಭಾಗವಿದ್ದು, ಸನ್ಯಾಸ ಜೀವನ ಸಂಚಿತ ಕರ್ಮ ನಾಶ ಮಾಡಿ ಮುಕ್ತಿ ಪಡೆಯಲು ಮಹಾವ್ರತಗಳು ನೆರವಾಗುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ಯತಿ ದೀಕ್ಷೆಗೆ ವಿಶೇಷ ಮಹತ್ವ ನೀಡಲಾಗಿದೆ,” ಎಂದು ನುಡಿದರು.

ಮನೋಜ್ ಜೈನ್, ಪಂಡಿತ್ ಪ್ರದೀಪ್, ಮಹೇಶ್ ಪಂಡಿತ್, ದಿಲೀಪ್ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಸ್ವಾಮೀಜಿಗಳು ಶೀತಲ ನಾಥ ತೀರ್ಥಂಕರ ಜನ್ಮಭೂಮಿ — ಜೈನ, ಹಿಂದು, ಬೌದ್ಧ ಧರ್ಮಗಳ ತ್ರಿವೇಣಿ ಸಂಗಮ — ಜಾರ್ಖಂಡ್ ರಾಜ್ಯದ ಇಟ್‌ಕೋರಿ, ಬದ್ಧಲ್ಪುರ ಕ್ಷೇತ್ರ ದರ್ಶನ ಮಾಡಿದರು.