ಬಿಹಾರ್, ಜಾರ್ಖಂಡ್ ರಾಜ್ಯದ ರಾಜ್‌ಗಿರಿ, ಕುಂಡಲಪುರ, ಪಾವಪುರಿ, ಬದ್ಧಲ್ಪುರ, ನಳಂದಾ ವಿಶ್ವವಿದ್ಯಾಲಯ ಸಮುಚ್ಛಯಕ್ಕೆ ಧಾರ್ಮಿಕ ಯಾತ್ರೆಯಲ್ಲಿ ನಿರತರಾಗಿರುವ ಮೂಡಬಿದಿರೆ ಸ್ವಾಮೀಜಿ ದಿನಾಂಕ 01.12.2025 ಹಾಗೂ 02.12.2025ರಂದು ತೀರ್ಥಯಾತ್ರೆ ಮುಂದುವರಿಸಿದರು.


ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯವರ್ಯ ಮಹಾ ಸ್ವಾಮೀಜಿಗಳವರಿಂದ ಜೈನ್ ಸಿದ್ಧಕ್ಷೇತ್ರ ದರ್ಶನ, ನಳಂದಾ ವಿಶ್ವವಿದ್ಯಾಲಯ ಸಮುಚ್ಛಯದಲ್ಲಿ ಅಂತರರಾಷ್ಟ್ರೀಯ ತ್ರಿಪಿಟಕ ಮಂತ್ರಪಠಣ ಗೋಷ್ಠಿ ಮತ್ತು ಬುದ್ಧಗಯಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಈ ಸಂದರ್ಭದಲ್ಲಿ ಅನೇಕ ವಿದ್ಯಾವಂತರೂ, ಬ್ಯಾಂಕಾಕ್‌ನ ಬೌದ್ಧ ಭಿಕ್ಷುಗರೂ ಉಪಸ್ಥಿತರಿದ್ದರು.
02.12.2025ರಂದು ಮಹಾವೀರ ಮುಕ್ತಿ ಪಡೆದ ಪಾವಪುರಿ ಮತ್ತು ಮೊದಲ ಉಪದೇಶ ನೀಡಿದ ರಾಜ್‌ಗಿರಿಯ ವಿಪುಲಾಚಲ ಪರ್ವತದ ವೀರಾಯತನ ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮ ವೀಕ್ಷಿಸಲಾಯಿತು.
ಸಂಜೆ ಕೊಡರ್ಮಾದ ಜೈನ ಸಮಾಜ ನಡೆಸಿದ ಆರಾಧನಾ ಸಮಾರಂಭದಲ್ಲಿ ಅಧ್ಯಕ್ಷ ಸುರೇಶ್ ಝಾಂಜ್ರಿ ಸ್ವಾಮೀಜಿಯನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೂಡಬಿದಿರೆ ಸ್ವಾಮೀಜಿ ಅವರು:
ಅದಿನಾಥ ಸ್ವಾಮಿಯ 48 ಶ್ಲೋಕಗಳುಳ್ಳ ಆಚಾರ್ಯ ಮಾನತುಂಗರ ಜಗತ್ತಿನ ಸುಮಾರು 130 ಭಾಷೆಗಳಿಗೆ ಅನುವಾದಗೊಂಡ ಜನಪ್ರಿಯ ಸ್ತೋತ್ರವು ಭಕ್ತಿಯಲ್ಲಿ ಮಹತ್ವದ್ದಾಗಿದೆ.
ಸಂಸಾರ ಜೀವನದಲ್ಲಿ ದುಃಖವನ್ನು ಸಂಪೂರ್ಣ ದೂರ ಮಾಡಲಾಗದರೂ ಧಾರ್ಮಿಕ ಜೀವನ, ಆರಾಧನೆ, ಪೂಜೆ, ಚತುರ್ವಿಧ ದಾನದ ಮೂಲಕ ಜನರ ದುಃಖ ತಾಳ್ಮೆಯಿಂದ ನಿವಾರಣೆ ಮಾಡುವುದಕ್ಕೆ ಸಾಧ್ಯವೆಂದು ಹೇಳಿದರು.
ಭಕ್ತಿ, ಪೂಜೆ, ಆರಾಧನೆ ಮನಸಿಗೆ ಶಾಂತಿ ನೀಡುವುದರೊಂದಿಗೆ ಸ್ವರ ಮತ್ತು ಬೀಜಮಂತ್ರ ವಿದ್ಯೆಯಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು ಎಂದು ಭಾರತೀಯ ವೈದ್ಯಶಾಸ್ತ್ರ ತಿಳಿಸುತ್ತದೆ. ಈ ಕಾರಣಕ್ಕಾಗಿ ಅದಕ್ಕೆ ವಿಶೇಷ ಮಹತ್ವ ನೀಡಲಾಗಿದೆ ಎಂದು ಸ್ವಾಮೀಜಿ ಹೇಳಿದರು.
ಈ ಸಂದರ್ಭದಲ್ಲಿ ಅದಿನಾಥ ಸ್ವಾಮಿಯ ಭಜನೆ ಮತ್ತು ಆರತಿ ಜರುಗಿತು. ಪ್ರದೀಪ್, ಪಂಡಿತ್, ವಿಜಯ್ ಜೈನ್, ದಿಲೀಪ್, ಪ್ರೇಮ್ ವಿಜಯ್, ಪೂನಂ ಜೈನ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ 03.12.2025ರಂದು ಬೆಳಿಗ್ಗೆ ಸ್ವಾಮೀಜಿ ಕೊಲ್ಕತ್ತಾದ ಚೌರಂಗಿ ಬಸದಿ ದರ್ಶನ ಮಾಡಿ ಸಂಜೆ ಕ್ಷೇತ್ರಕ್ಕೆ ವಾಪಾಸಾದರು.