ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಎಂದು ಐದು ಭಾಷೆಗಳಲ್ಲಿ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‍ಕುಮಾರ್ ನಟಿಸಿದ ಜೇಮ್ಸ್ ಚಿತ್ರವು ಅವರ ಜನ್ಮ ದಿನವಾದ ಮಾರ್ಚ್ 17ರಂದು ಬಿಡುಗಡೆ ಆಗುತ್ತದೆ.
ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕನ್ನಡ ಜೇಮ್ಸ್ ಬಿಡುಗಡೆ ಆಗಲಿದೆ. ಪುನೀತ್ ಅಕಾಲಿಕ ಮರಣದಿಂದಾಗಿ ಅವರ ಅಣ್ಣ ಶಿವರಾಜಕುಮಾರ್ ಮಾತು ನೀಡಿದ್ದಾರೆ. ಜೆ ವಿಂಗ್ ಸೆಕ್ಯೂರಿಟಿಯ ಪುನೀತ್ ಮತ್ತು ಮಾಫಿಯಾ ಗ್ಯಾಂಗ್ ತಾಕಲಾಟದ ಈ ಚಿತ್ರದ ನಿರ್ದೇಶಕರು ಚೇತನ್ ಕುಮಾರ್ ಮತ್ತು ನಾಯಕಿ ಪ್ರಿಯಾ ಆನಂದ್.