ವಿಶ್ವ ಮಹಿಳಾ ದಿನದ ಪ್ರಯಕ್ತ ಮಾರ್ಚ್ 8ರಂದು ಬ್ಯಾರಿ ಅಕಾಡೆಮಿಯ ಕಚೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಧಕಿಯರಿಗೆ ಸನ್ಮಾನ ನಡೆಯಿತು.
ಬ್ಯಾರಿ ಲೇಖಕಿ ಹಫ್ಸಾ ಬಾನು, ಲೇಖಕಿ ಮರಿಯಂ ಇಸ್ಮಾಯಿಲ್, ಶಿಕ್ಷಣ ಕ್ಷೇತ್ರದ ಡಾ. ಶಕೀರಾ ಇರ್ಫಾನಾ, ವೈದ್ಯಕೀಯ ಕ್ಷೇತ್ರದ ಶಮ್ನಾ ಮಿನಾಜ್, ಸಮಾಜ ಸೇವಾ ಕ್ಷೇತ್ರದ ಹಸೀನಾ ಇಸ್ಮಾಯಿಲ್ ಅವರುಗಳನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಚಂಚಲಾಕ್ಷಿ, ವೀಣಾ ಮಂಗಳೂರು, ಆಯಿಶಾ ಪೆರ್ನೆ, ರಹೀನಾ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.