ಸಿಂಧುದುರ್ಗ ಸಹಕಾರಿ‌ ಚುನಾವಣೆ ಸಂದರ್ಭದಲ್ಲಿ ಶಿವಸೇನೆಯ ಸಂತೋಷ್ ಪರಬ್‌ರನ್ನು ಕೊಲ್ಲಲು ಯತ್ನಿಸಿದ ಆರೋಪದಲ್ಲಿ ಬಿಜೆಪಿ ಶಾಸಕ ನಿತೀಶ್ ರಾಣೆ ಅವರನ್ನು ಸಿಂಧುದುರ್ಗ ಜಿಲ್ಲಾ ನ್ಯಾಯಾಲಯವು ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ಹಿಂದಕ್ಕೆ ಪಡೆದು ಜಿಲ್ಲಾ ಕೋರ್ಟಿಗೆ ಶರಣಾದರು. ಆದರೆ ಹೆಚ್ಚುವರಿ ನ್ಯಾಯಾಧೀಶರಾದ ಆರ್. ಬಿ. ರೋಟಿಯವರು ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ನಿತೀಶ್ ರಾಣೆಯವರು ಕೇಂದ್ರ ಮಂತ್ರಿ ನಾರಾಯಣ ರಾಣೆಯವರ ಮಗ. ಅವರನ್ನು ವಿಚಾರಣೆಗೆ ಪೋಲೀಸು ವಶಕ್ಕೆ ಪಡೆಯಲಾಗುತ್ತದೆ ಎಂದು ಸರಕಾರೀ ವಕೀಲ ಪ್ರದೀಪ್ ಗರತ್ ತಿಳಿಸಿದರು.