ನೀನು ಮತ್ತು ನಾನು
ನಾ ಹೂವಾದರೆ ನನ್ನ ಸುಗಂಧ ನೀನು.
ಹೃದಯ ನಾನಾದರೆ ನನ್ನ ಬಡಿತ ನೀನು.
ನಾ ಪ್ರಾಣವಾದರೆ ನನ್ನಾತ್ಮ ನೀನು.
ಜೀವವಾದರೆ ನಾನು.. ಜೀವನವೇ ನೀನು.
ಬಿಂಬವಾದರೆ ನಾ .. ನನ್ನ ನಿಜರೂಪ ನೀನು.
ನಾ ನಿನ್ನ ನೆರಳಾದರೆ ನನ್ನ ವ್ಯಕ್ತಿತ್ವ ನೀನು.
ನಾ ಶಬ್ದವಾದರೆ ನನ್ನ ಮಾತು ನೀನು.
ನಾ ನಿರಾಳವಾಗಿರಬಲ್ಲೆ ನನ್ನ ಜತೆಗಿದ್ದಾಗ ನೀನು.
-ಶೀಲಾ ಭಂಡಾರ್ಕರ್